ವಿಜಯಪುರ: ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ನಗರದ ಖೇಡ ಸಭಾ ಭವನದಲ್ಲಿ ಭಾನುವಾರ ಮಹಿಳಾ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿ ಮೀನಾಕ್ಷಿ ಸಿಂಧೆ ಮಾತನಾಡಿ, ಸದ್ಯ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುನ್ನಡೆ ಸಾಧಿಸುತ್ತಿದ್ದಾರೆ. ಭ್ರೂಣಹತ್ಯೆಯಂತಹ ಅನಿಷ್ಠ ಪಿಡುಗುಗಳ ವಿರುದ್ಧ ನಾವೆಲ್ಲರೂ ಹೋರಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ ಖೇಡ ಮಾತನಾಡಿ, ಮಹಿಳಾ ದಿನದ ಅಂಗವಾಗಿ ಅಂಗವಿಕಲರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಿ ಸತ್ಕರಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.
ಉಪ ಪ್ರಾಚಾರ್ಯ ಸಂಜೋತ ಪಾಟೀಲ, ಅಂಗವಿಕಲರ ಕ್ಷೇತ್ರದಲ್ಲಿ ಕಾರ್ಯ ನಿರ್ಮಿಸುತ್ತಿರುವ ಕಸ್ತೂರಿ ಬೂದಿಹಾಳ, ಶಂಕ್ರಮ್ಮ ಕೋರಿ, ಜಯಶ್ರೀ ವಾಂಗಿ, ಜಿಲ್ಲಾ ಉಪಾಧ್ಯಕ್ಷ ಎಂ.ಬಿ. ಉಮ್ರಾಣಿ. ಅಶೋಕ ವಾಲಿಕಾರ, ಅಂಬಣ್ಣ ಗುನ್ನಾಪುರ, ಸಂತೋಷ ಕಲ್ಗುಡಿ, ರಾಜು ಕುಮಟಗಿ ಮತ್ತಿತರರಿದ್ದರು.