ಮಹಿಳಾ ಸಾಂಸ್ಕೃತಿಕ ಹಬ್ಬ

ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬವನ್ನು ಡಾ. ಸೀತವ್ವ ಜೋಡಟ್ಟಿ ಉದ್ಘಾಟಿಸಿದರು. ವೀಣಾ ಕಾಶಪ್ಪನವರ, ಶಂಕರಗೌಡ ಸೋಮನಾಳ, ಲಕ್ಷಿ÷್ಮÃದೇವಿ ವೈ. ಮತ್ತಿತರರಿದ್ದಾರೆ.
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬವನ್ನು ಡಾ. ಸೀತವ್ವ ಜೋಡಟ್ಟಿ ಉದ್ಘಾಟಿಸಿದರು. ವೀಣಾ ಕಾಶಪ್ಪನವರ, ಶಂಕರಗೌಡ ಸೋಮನಾಳ, ಲಕ್ಷಿ÷್ಮÃದೇವಿ ವೈ. ಮತ್ತಿತರರಿದ್ದಾರೆ.
Published on
ವಿಜಯಪುರ: ಮಹಿಳೆಯರು ಅಬಲೆಯಲ್ಲ ಸಬಲರು. ತೊಟ್ಟಿಲು ತೂಗುವ ಕೈ ದೇಶವನ್ನು ಆಳುತ್ತದೆ. ಅದಕ್ಕೆ ರಾಷ್ಟçಪತಿ ಮುರ್ಮು ವರು ನಿದರ್ಶನ. ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರ ಬಂದಾಗಲೇ ಸುಧಾರಣೆಯಾಗಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ. ಸೀತವ್ವ ಜೋಡಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ವಿವಿಧ ನಿಕಾಯಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬ-2026 ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ ಅವರ ಶಿಕ್ಷಣ, ಸಂಘಟನೆ, ಹೋರಾಟ ಈ ಸಂದೇಶಗಳೆ ಮೂಲ ಮಂತ್ರಗಳಾಗಿವೆ ಎಂದು ಅವರು ತಿಳಿಸಿದರು.
ಬಾಗಲಕೋಟೆ ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಮಹಿಳೆಯರು ಸದ್ಯ ಪ್ರತಿಯೊಂದು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಕೇವಲ ಮನೆಯನ್ನು ನಿರ್ವಹಿಸುವುದಲ್ಲದೇ ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಸಿAಡಿಕೇಟ್ ಸದಸ್ಯೆ ಮಮತಾ ಎಸ್. ಮಾತನಾಡಿ, ಮಹಿಳೆಯರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಬಲಿಷ್ಠ ರಾಷ್ಟವನ್ನು ಕಟ್ಟಲು ಸಾಧ್ಯ. ಅಲ್ಲದೇ. ತಾವು ಮಾತ್ರ ಬೆಳೆಯದೇ ತಮ್ಮ ಜತೆಯಲ್ಲಿ ಇದ್ದವರನ್ನು ಬೆಳೆಸಿದಾಗ ಮಹಿಳಾ ಸಬಲೀಕರಣ ಸಾಧ್ಯ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ. ಶಶಿಕಲಾ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.
ಮೌಲ್ಯಮಾಪನ ಕುಲಸಚಿವ ಬಿ.ಎಲ್. ಲಕ್ಕಣ್ಣವರ ಸಂವಿಧಾನ ಪ್ರಸ್ತಾವನೆ ಓದಿಸಿದರು. ಲಕ್ಷಿ÷್ಮÃದೇವಿ ವೈ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಂತಾದೇವಿ ಟಿ. ಸ್ವಾಗತಿಸಿದರು. ತಹಮೀನಾ ಕೋಲಾರ, ಕಲಾವತಿ ಕಾಂಬಳೆ, ರಾಜು ಬಾಗಲಕೋಟೆ ನಿರೂಪಿಸಿದರು. ರುಕ್ಮವ್ವ ಅಗಸರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net