ಉಚ್ಛಾಟಿತ ಶಾಸಕ ಯತ್ನಾಳಿರಿಗೇಕೆ ಕ್ರೆಡಿಟ್, ಉಪ ಚುನಾವಣೆ ಕುರಿತು ಅಪ್ಪು ಪಟ್ಟಣಶೆಟ್ಟಿ ಹೇಳಿದ್ದೇನು?

APPU-PATTANASHETTI
APPU-PATTANASHETTI
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯತ್ನಾಳ ಮರಳಿ ಬಿಜೆಪಿಗೆ ಬರಲ್ಲ
  • ಸ್ವಂತ ಪಾರ್ಟಿ ಮಾಡೋದಾಗಿ ಯತ್ನಾಳ ಹೇಳಿದ್ದಾರೆ
  • ಈಗಾಗಲೇ ಸ್ವತಂತ್ರವಾಗಿ ಓಡಾಡುತ್ತಿರುವ ಯತ್ನಾಳ
ವಿಜಯಪುರ: ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದಿರುವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು, ಪಕ್ಷದ ಪ್ರಮುಖರನ್ನು ಉಚ್ಚಾಟಿಸುವ ಮೂಲಕ ಕಾಂಗ್ರೆಸ್ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡಿದೆ ಎಂದಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ದಾವಣಗೆರೆಯಲ್ಲಂತೂ ಕಾಂಗ್ರೆಸ್ ಸೋಲಲಿದೆ ಎಂಬುದಕ್ಕೆ ಸದ್ಯದ ಬೆಳವಣಿಗೆಗಳೇ ಸಾಕ್ಷಿ ಎಂದರು.
ಇನ್ನು ಬಾಗಲಕೋಟೆಯ ಗೆಲುವಿನಲ್ಲಿ ಯತ್ನಾಳರಿಗೆ ಕ್ರೆಡಿಟ್ ಸಿಗುವುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಅವರಿಗೇಕೆ ಕ್ರೆಡಿಟ್ ಎಂದರಲ್ಲದೇ, ಪಕ್ಷದ ಅಭ್ಯರ್ಥಿಗಳು ಹಗಲಿರುಳು ಶ್ರಮಿಸಿದ್ದಾರೆ. ಪಕ್ಷದ ಪರ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಯತ್ನಾಳ ಪಕ್ಷದ ಪರವಾಗಿ ಪ್ರಚಾರ ನಡೆಸಿಲ್ಲ. ಅವರನ್ನು ಯಾರೂ ಬಾ ಅಂತಲೂ ಹೇಳಿಲ್ಲ; ಬೇಡ ಅಂತಲೂ ಹೇಳಿಲ್ಲ. ಅಭ್ಯರ್ಥಿ ತಮ್ಮ ಆಪ್ತ ಎಂಬ ನೆಪ ಮಾಡಿ ಬಂದಿದ್ದಾರೆಂದು ಲೇವಡಿ ಮಾಡಿದರು.
ಯತ್ನಾಳ ಅವರದ್ದೇ ಆದ ಸ್ಟೈಲ್‌ನಲ್ಲಿ ಅವರು ಹೇಳುತ್ತಾರೆ. ಅವರದ್ದೇ ಆದ ಸಿಬ್ಬಂದಿಯನ್ನಿಟ್ಟುಕೊಂಡಿದ್ದು, ಆ ಸಿಬ್ಬಂದಿ ಕೆಳಗೆ, ಮೇಲೆ ಎಲ್ಲಾ ಕಡೆಯಿಂದ ಫೋಟೊ ಹೊಡೆದು ಹಾಕುತ್ತಾರೆ. ತಮ್ಮ ಮನಸ್ಸಿಗೆ ಬಂದಿದ್ದು ಬರೆದುಕೊಳ್ಳುತ್ತಾರೆಂದರು.
ಇನ್ನು ಯತ್ನಾಳ ಘರ್‌ವಾಪಸ್ಸಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಯತ್ನಾಳ ಸ್ವಂತ ಪಾರ್ಟಿ ಮಾಡೋದಾಗಿ ಹೇಳಿದ್ದಾರೆ. ಈಗಾಗಲೇ ಸ್ವತಂತ್ರ ವಾಗಿ ಓಡಾಡುತ್ತಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net