ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿದೆ. 2047 ರ ಭಾರತ ಹೇಗಿರಬೇಕೆಂಬ ವಿಕಸಿತ ಭಾರತ ಪರಿಕಲ್ಪನೆಯೊಂದಿಗೆ ಮೋದಿ ಸರ್ಕಾರ ಕಾರ್ಯ ತತ್ಪರವಾಗಿದೆ. ಶೈಕ್ಷಣಿಕ ಕ್ಷೇತ್ರ, ಕೈಗಾರಿಕೆ, ರೈಲ್ವೆ, ವಿಮಾನ ಯಾನ ಕ್ಷೇತ್ರ ಸೇರಿ ಅನೇಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನರೇಂದ್ರ ಮೋದಿ ಅಭಿವೃದ್ಧಿ ಕಾಣಬೇಕಾದರೆ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳನ್ನು ಒಮ್ಮೆ ಕಾಣಿ. ಅದನ್ನು ಬಿಟ್ಟು ವೃಥಾ ಆರೋಪ ನಿಲ್ಲಿಸಿ ಮೋದಿ ಸರ್ಕಾರದ ಸಾಧನೆ ಬಿಚ್ಚಿಡುತ್ತಲೇ ಕಾಂಗ್ರೆಸ್‌ಗೆ ಸವಾಲೆಸೆದರು.