ಸಚಿವ ಸತೀಶ ಜಾರಕಿಹೊಳಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಭೇಟಿಯಾದರೆ ತಪ್ಪೇನು? ನಾನು ಸಹ ಡಿಸಿಎಂ ಅವರನ್ನು ಭೇಟಿಯಾಗಿದ್ದೇನೆ? ಹಬ್ಬದ ಉಡುಗೊರೆ ಕೊಟ್ಟಿದ್ದೇನೆ, ಸಿಹಿ ಹಂಚಿದ್ದೇನೆ. ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಚಿವರಾಗುವ ಅರ್ಹತೆ ಇದೆ. ಅವರವರ ಅನುಯಾಯಿಗಳು ತಮ್ಮ ನಾಯಕ ಸಿಎಂ ಆಗಲಿ ಎಂದು ಬಯಸುವುದು ಸಹಜ. ಅನುಯಾಯಿಗಳ ಘೋಷಣೆಗೆ ಅನ್ಯ ಅರ್ಥ ಕಲ್ಪಿಸಬೇಕಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಪರಮೇಶ್ವರ ಎಲ್ಲರೂ ನಮ್ಮ ನಾಯಕರೇ. ನಾವೆಲ್ಲ ಒಟ್ಟಾಗಿದ್ದೇವೆ. ಬಿಜೆಪಿಯೇ ಒಡೆದು ಛಿದ್ರವಾಗಿದೆ. ಅಲ್ಲಿ 20 ಬಣಗಳಿವೆ. ಆರ್.ಅಶೋಕ ಅವರ ಬದಲಿಗೆ ಲೂಟಿಕೋರ ಜನಾರ್ಧನ ರೆಡ್ಡಿಯನ್ನು ಪ್ರತಿಪಕ್ಷ ನಾಯಕ ಮಾಡಿ ಸುಮ್ಮನೆ ಎಂದು ಲೇವಡಿ ಮಾಡಿದರು.