ಚಪ್ಪಲಿ ಎಸೆಯುವುದು ಯಾವ ಸಂಸ್ಕೃತಿ?

ಬಸವನಬಾಗೇವಾಡಿ ಪಟ್ಟಣದಲ್ಲಿ ಬಾಗಲಕೋಟೆ ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕು ಘಟಕದವರು ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ ಸಾಲೋಡಗಿ, ಕಾರ್ಯದರ್ಶಿ ಅಶ್ವಿನ್ ಕುಮಾರ್ ಪಟ್ಟಣಶೆಟ್ಟಿ ಬಜರಂಗದಳ ಅಧ್ಯಕ್ಷ ರಾಹುಲ್ ಜಗತ್ತಾಪ, ದುರ್ಗಾ ವಾಹಿನಿ ಅಧ್ಯಕ್ಷ ರೂಪಾ ಜಾಧವ ಇತರರಿದ್ದರು.
ಬಸವನಬಾಗೇವಾಡಿ ಪಟ್ಟಣದಲ್ಲಿ ಬಾಗಲಕೋಟೆ ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕು ಘಟಕದವರು ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ ಸಾಲೋಡಗಿ, ಕಾರ್ಯದರ್ಶಿ ಅಶ್ವಿನ್ ಕುಮಾರ್ ಪಟ್ಟಣಶೆಟ್ಟಿ ಬಜರಂಗದಳ ಅಧ್ಯಕ್ಷ ರಾಹುಲ್ ಜಗತ್ತಾಪ, ದುರ್ಗಾ ವಾಹಿನಿ ಅಧ್ಯಕ್ಷ ರೂಪಾ ಜಾಧವ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಹಿಂದೂಪರ ಸಂಘಟನೆ ಮುಖಂಡರ ಪ್ರಶ್ನೆ
  • ಬೃಹತ್ ಪ್ರತಿಭಟನೆ
  • ಬೀದಿಗಳಲ್ಲಿ ಮೆರವಣಿಗೆ
ಬಸವನಬಾಗೇವಾಡಿ: ಬಾಗಲಕೋಟೆಯಲ್ಲಿ ಕಳೆದ ಫೆ. 19ರಂದು ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.
ಗುರುವಾರ ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾ ವಾಹಿನಿ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ
ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟಿಸಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ ಸಾಲೋಡಗಿ, ಕಾರ್ಯದರ್ಶಿ ಅಶ್ವಿನ್ ಕುಮಾರ್ ಪಟ್ಟಣಶೆಟ್ಟಿ ಬಜರಂಗದಳ ಅಧ್ಯಕ್ಷ ರಾಹುಲ್ ಜಗತ್ತಾಪ, ದುರ್ಗಾ ವಾಹಿನಿ ಅಧ್ಯಕ್ಷ ರೂಪಾ ಜಾಧವ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಕಲ್ಲು ಸೊನ್ನದ, ಮುದಕಣ್ಣ ಹೊರ್ತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಧರ್ಮ ಹಾಗೂ ಹಿಂದೂಗಳ ಮೇಲೆ ಬೇರೆ ಕೋಮಿನ ಜನರು ನಿರಂತರವಾಗಿ ಧಾರ್ಮಿಕ ಕಾರ್ಯಗಳ ಮೇಲೆ ಕಲ್ಲು ತೂರಾಟ ಮತ್ತು ದಾಂಧಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ದೇಶ ಹಿಂದೂಗಳ ರಾಷ್ಟ್ರ ಇಲ್ಲಿನ ಹಿಂದೂಗಳ ಹಬ್ಬಗಳ ಆಚರಣೆ ಮಾಡುವಾಗ ಮುಸ್ಲಿಂ ಸಮಾಜದ ಕೆಲವರು ಬಾಗಲಕೋಟಿಯಲ್ಲಿ ಶಿವಾಜಿ ಜಯಂತಿ ದಿನದಂದು ಮೆರವಣಿಗೆ ಹೊರಟ ವೇಳೆ ಪವಿತ್ರ ಸ್ಥಳವೆಂದು ಹೇಳುವ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ಎಸೆಯುವುದು ನಿಮ್ಮ ಯಾವ ಸಂಸ್ಕೃತಿ? ಎಂದು ಪ್ರಶ್ನಿಸಿದರು.
ದೇಶದ ಬಹು ಸಂಖ್ಯಾತ ಹಿಂದೂಗಳು ಎಲ್ಲ ಧರ್ಮಿಯರ ಹಬ್ಬಗಳ ಆಚರಣೆ ಮಾಡುವಾಗ ಯಾವುದೇ ಅಡಚಣೆ ಮಾಡುವುದಿಲ್ಲ. ಆದರೆ ಹಬ್ಬಗಳ ಆಚರಣೆ ವೇಳೆ ಈ ರೀತಿ ದಾಂಧಲೆ ಮಾಡುವುದನ್ನು ತೀವ್ರವಾಗಿ ಖಂಡಿಸಿ, ಕಲ್ಲು ಮತ್ತು ಚಪ್ಪಲಿ ಎಸೆದ ಗೂಂಡಾಗಳನ್ನು ತಕ್ಷಣವೇ ಜಿಲ್ಲೆಯಿಂದ ಗಡಿ ಪಾರುಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷವೇ ಇಂತಹ ಘಟನೆಗಳಿಗೆ ಕಾರಣ. ಕೆಲವರಿಗೆ ಸರ್ಕಾರದ ಭಯವೇ ಇಲ್ಲದೆ ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ರಕ್ಷಣೆ ನೀಡುವ ಪೊಲೀಸರ ಮೇಲೆ (ಎಸ್ಪಿ) ಅವರ ಮೇಲೆ ಕಲ್ಲು ಎಸೆಯುತ್ತಾರೆ. ಇನ್ನೂ ಸಾಮಾನ್ಯ ಜನರ ಗತಿಯೇನು? ಎಲ್ಲಿಗೆ ಬಂದಿದೆ? ಎಂದು ಪ್ರಶ್ನಿಸಿದರು.
ರಾಜ್ಯದ ಕಾನೂನು ಸುವ್ಯವಸ್ಥೆ ಈ ದುಷ್ಕೃತ್ಯ ಎಸೆಗಿದ ಗೂಂಡಾಗಳನ್ನು ಬಂಧಿಸಿ, ಕಠಿಣ ಶಿಕ್ಷೆ ಹಾಗೂ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಸ್ವರೂಪಾ ಬಿಂಜಲಬಾವಿ, ಹಿಂದೂಪರ ಸಂಘಟನೆ ಮುಖಂಡ ದಯಾನಂದ ಸಾರವಾಡ, ಬಸವರಾಜ ಬಿಜಾಪುರ, ಸೀತಾರಾಮ ಭಜಂತ್ರಿ, ವಿನೂತ ಕಲ್ಲೂರ, ವಿಲಾಸ ಗಾಯಕವಾಡ, ಅಮರ ಗಾಯಕವಾಡ, ಶಿವರಾಜ ರಜಪೂತ, ಗಂಗೂರ, ಅನೀಲ ಪವಾರ, ಸಂತೋಷ ನಾಯಕ, ಪ್ರವೀಣ ಪವಾರ, ಸಂತೋಷ ಗಂಜಾಳ, ಹಣಮಂತ ಕಾಮನಕೇರಿ, ಪ್ರಿಯಾ ರಜಪುತ, ಶಕುಂತಲಾ ಬಿಜಾಪುರ, ತುಳಸಾ ಮನಗೂಳಿ, ಸೀತಾ ಪವಾರ, ಶೋಭಾ ಜಗತಾಪ, ಲಕ್ಷ್ಮೀ ಜಗದಾಳೆ, ಮಿತ್ರವ್ವ ಬಿದರಕುಂದಿ, ಶಕುಂತಲಾ ನಿಕ್ಕಂ, ಸೇರಿ ಅನೇಕರು ಭಾಗವಹಿಸಿದ್ದರು. ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ಎ.ಎಚ್. ಬಳೂರಗಿ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net