ಜಾನುವಾರು, ಪ್ರಾಣಿ ಪಕ್ಷಿಗಳಿಗೆ ನೀರುಣಿಸಿ

ಬಸವನಬಾಗೇವಾಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಜೇನುಗೂಡು ಸಂಸ್ಥೆ ವತಿಯಿಂದ ಪಕ್ಷಿಗಳಿಗೆ ಕುಡಿಯುವ ನೀರಿನ ತಟ್ಟಿ, ಆಹಾರ, ಸಿರಿದಾನ್ಯ ಪಟ್ಟಣದ ವಿವಿಧ ಮನೆ ಮತ್ತು ಕಚೇರಿಗಳಿಗೆ ವಿತರಿಸಲಾಯಿತು.ಹನುಮೇಶ ಕಲಾಲ, ಅವ್ವನ ಗ್ವಾತಗಿ, ದಯಾನಂದ ಹೊರ್ತಿ ಮತ್ತಿತರರಿದ್ದರು.

Published on
ಬಸವನಬಾಗೇವಾಡಿ: ದಾನದಲ್ಲಿ ಶ್ರೇಷ್ಟದಾನ ಅನ್ನದಾನ, ಹಾಗಾಗಿ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಮತ್ತು ಆಹಾರ ವ್ಯವಸ್ಥೆ ಮಾಡಬೇಕು ಎಂದು ಪಕ್ಷಿ ಪ್ರೇಮಿ ಸಮಾಜ ಸೇವಕ ಬಸನಗೌಡ ಪಾಟೀಲ ಹೇಳಿದರು.
ಶುಕ್ರವಾರ ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜೇನುಗೂಂಡು ಸಂಸ್ಥೆ ವತಿಯಿಂದ ಬಿರು ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳು ಕುಡಿಯುವ ನೀರು ಗಡಿಗೆ ಮತ್ತು ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ಜೇನುಗೂಡು ಸಂಸ್ಥೆ ಮುದ್ದೇಬಿಹಾಳ ಬಸನಗೌಡ ಪಾಟೀಲ ಸಹಯೋಗದಲ್ಲಿ ಪಟ್ಟಣದಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ತಟ್ಟಿ, ಪಕ್ಷಿಗಳಿಗೆ ಆಹಾರ, ಸಿರಿದಾನ್ಯ ಪಟ್ಟಣದ ವಿವಿಧ ಮನೆ ಮತ್ತು ಕಚೇರಿಗಳಿಗೆ ವಿತರಿಸಲಾಯಿತು.
ರವಿ ಚಿಕ್ಕೊಂಡ, ಶಂಕರಗೌಡ ಪಾಟೀಲ, ಹನುಮೇಶ ಕಲಾಲ, ಅವ್ವನ ಗ್ವಾತಗಿ, ದಯಾನಂದ ಹೊರ್ತಿ, ಆನಂದ್ ಪತ್ತಾರ, ಬಸವಂತ ಕಾಮಾತ, ಪ್ರದೀಪ್ ಮುಂಜಾನೆ, ಬಸವರಾಜ್ ಮದನಶೆಟ್ಟಿ, ಸತೀಶ್ ಕ್ವಾಟಿ ಮತ್ತಿತರರಿದ್ದರು.'
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net