ವಿದ್ಯಾರ್ಥಿಗಳಿಗೆ ಮತದಾನದ ಅರಿವು ಪೂರಕ

ವಿಜಯಪುರದ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ `ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಜಾಗೃತಿ ಅಭಿಯಾನ' ನಡೆಯಿತು.
ವಿಜಯಪುರದ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ `ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಜಾಗೃತಿ ಅಭಿಯಾನ' ನಡೆಯಿತು.
Published on
ವಿಜಯಪುರ : ಇಲ್ಲಿನ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ `ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಜಾಗೃತಿ ಅಭಿಯಾನ-2026' ಇತ್ತೀಚೆಗೆ ನಡೆಯಿತು.
ಮಹಾವಿದ್ಯಾಲಯದ ರಾಜಕೀಯ ಶಾಸö ವಿಭಾಗ, ರಾಷ್ಟಿçÃಯ ಸೇವಾ ಯೋಜನೆ, ಎಲೆಕ್ಟೋರಲ್ ಲಿಟರಸಿ ಕ್ಲಬ್ ಮತ್ತು ಮತದಾರರ ಜಾಗೃತಿ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
18 ವರ್ಷ ತುಂಬಿದ ಯುವ ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸುವುದು, ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳ ಕುರಿತು ಮಾಹಿತಿ ನೀಡುವುದು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಕುರಿತು ಜಾಗೃತಿ ಮೂಡಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಎನ್. ಕೆಂಗನಾಳ, ಉಪನ್ಯಾಸಕರಾದ ಅನೀಲ ಅಬಲಾಪೂರ, ಸೌಮ್ಯಾ ಪಾಟೀಲ, ಮಧು ಹತ್ತಿ, ಗುರುದೇವಿ ಪತ್ತಾರ, ಭಾಗ್ಯ ಹಿರೇಮಠ, ಮಾಲಾಶ್ರೀ ಕನ್ನಾಳ, ಭಾಸ್ಕರ ಕುಲಕರ್ಣಿ, ಸಂಕೇತ ರೊಳ್ಳಿ, ಶರಣಬಸಪ್ಪ ಶಿವಶರಣ, ಮಾಳಪ್ಪ ಸಿದ್ನಾತ, ಸಚಿನ ಅವಟಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net