ನಗರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ಕರ್ನಾಟಕದಲ್ಲಿ ಮಾತ್ರವಲ್ಲದೆ, ಇಡೀ ದೇಶದ¯್ಲೆÃ ಅತ್ಯುತ್ತಮ ವಾತಾವರಣ ನಗರಗಳ ಪಟ್ಟಿಯಲ್ಲಿ ವಿಜಯಪುರ 4ನೇ ಸ್ಥಾನದಲ್ಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಹಾತ್ಮ ಗಾಂಽ ನಗರ ವಿಕಾಸ ಯೋಜನೆಯ 2ನೇ ಹಂತದಲ್ಲಿ ಹಾಗೂ 2025-26ನೇ ಸಾಲಿನ ಅಮೃತ 2.0 ಅನುದಾನ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ನಗರದ ವಾರ್ಡ್ ನಂ.11 ರ ವ್ಯಾಪ್ತಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 5 ರ ಹಿಂದಿನ ಭಾಗದ ಪ್ರದೇಶದಲ್ಲಿ 1.5 ಕೋಟಿ ರೂ. ಅನುದಾನದಲ್ಲಿ ಆಂತರಿಕ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ, ವಾರ್ಡ್ ನಂ. 6ರಲ್ಲಿ ಬರುವ ಅಲಕುಂಟೆ ನಗರದಲ್ಲಿ 2 ಕೋಟಿ ರೂ. ಅನುದಾನದಲ್ಲಿ ಒಳಚರಂಡಿ ಮತ್ತು ಆಂತರಿಕ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ ಮತ್ತು 32.59 ಲಕ್ಷ ರೂ. ಅನುದಾನದಲ್ಲಿ ವಾರ್ಡ್ ನಂ. 6ರಲ್ಲಿ ಬರುವ ಅಲಕುಂಟೆ ನಗರದ ಸಿದ್ದಿ ವಿನಾಯಕ ಗುಡಿ ಬಳಿಯ ಉದ್ಯಾನವನ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.
ವಿಜಯಪುರ ನಗರ 8 ವರ್ಷಗಳ ಹಿಂದೆ ಹೇಗಿತ್ತು? ಸದ್ಯ ವಿಜಯಪುರ ನಗರ ಹೇಗೆ ಬದಲಾಗಿದೆ ಎನ್ನುವುದು ಕಣ್ಣಿಗೆ ಕಾಣುತ್ತದೆ. ವಿದೇಶ ಅಥವಾ ಹೊರ ರಾಜ್ಯಗಳಿಂದ ನಗರಕ್ಕೆ ಬಂದವರು ಮತ್ತು ಪ್ರವಾಸಿಗರು ಇಲ್ಲಿಯ ಅಭಿವೃದ್ಧಿ ಕಾರ್ಯ ಮೆಚ್ಚಿ ಹಾಡಿ ಹೊಗಳುತ್ತಿz್ದÁರೆ. ಹಲವರು ಅಭಿವೃದ್ಧಿ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿ ಖುಷಿ ವ್ಯಕ್ತಪಡಿಸುತ್ತಿದ್ದು, ಅದಕ್ಕೆಲ್ಲ ಕಾರಣ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಗೆಲ್ಲಿಸಿದ್ದು. ಈ ಅಭಿವೃದ್ಧಿ ಕಾರ್ಯ ಮುಂದುವರೆಯಲು ಮುಂದಿನ ಚುನಾವಣೆಗಳಲ್ಲಿ ಸಹ ಮನೆಯಿಂದ ಹೊರ ಬರುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಬೇಕು ಎಂದು ಶಾಸಕ ಯತ್ನಾಳ ಸಲಹೆ ನೀಡಿದರು.
ಮಹಾನಗರ ಪಾಲಿಕೆಯ ಮೇಯರ್ ಎಂ.ಎಸ್. ಕರಡಿ, ಉಪ ಮೇಯರ್ ಸುಮಿತ್ರಾ ಜಾಧವ, ಸದಸ್ಯರಾದ ರಾಜಶೇಖರ ಮಗಿಮಠ, ವಿಠ್ಠಲ ಹೊಸಪೇಟೆ, ರಾಜಶೇಖರ ಕುರಿಯವರ, ಮಳುಗೌಡ ಪಾಟೀಲ, ಜವಾಹರ ಗೋಸಾವಿ, ಚಂದ್ರು ಚೌದರಿ ಮತ್ತಿತರರಿದ್ದರು.