ವೈಭವದಿಂದ ವರ್ಧಂತಿ ಉತ್ಸವ ಆಚರಣೆ

ವಿಜಯಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ರಾಯರ ವರ್ಧಂತಿ ಉತ್ಸವದ ಅಂಗವಾಗಿ ಸಂಭ್ರಮದ ರಥೋತ್ಸವ ನಡೆಯಿತು. ಗೋಪಾಲ ನಾಯಕ, ಪಂ. ಮಧ್ವೇಶಾಚಾರ್ಯ ಜೋಶಿ, ವಾಮನರಾವ ದೇಶಪಾಂಡೆ ಮತ್ತಿತರರಿದ್ದಾರೆ.
ವಿಜಯಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ರಾಯರ ವರ್ಧಂತಿ ಉತ್ಸವದ ಅಂಗವಾಗಿ ಸಂಭ್ರಮದ ರಥೋತ್ಸವ ನಡೆಯಿತು. ಗೋಪಾಲ ನಾಯಕ, ಪಂ. ಮಧ್ವೇಶಾಚಾರ್ಯ ಜೋಶಿ, ವಾಮನರಾವ ದೇಶಪಾಂಡೆ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • 431ನೇ ವರ್ಧಂತಿ ಉತ್ಸವ
ವಿಜಯಪುರ: ಇಲ್ಲಿನ ಬಾಗಲಕೋಟೆ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಗಳವರ 431ನೇ ವರ್ಧಂತಿ ಉತ್ಸವ ಭಕ್ತಿ, ಶ್ರದ್ಧೇಯಿಂದ ಆಚರಿಸಲಾಯಿತು.
ಬೆಳಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಅಲ್ಲದೇ, ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು.
ನಂತರ ಕನಕಸೇವೆ, ನಂತರ ವೇದ ಮಂತ್ರ ವಾದ್ಯಗಳೊಂದಿಗೆ ವೈಭವದ ರಥೋತ್ಸವ ಜರುಗಿತು. ಅಲಂಕೃತ ರಥದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಪ್ರತಿಮೆ ಕಂಗೊಳಿಸುತ್ತಿತ್ತು. ಭಕ್ತ ಸಂಗೀತ ಮಠದೆಲ್ಲೆಡೆ ಮಾರ್ಧನಿಸಿತು. ಶ್ರೀಮಠವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಜ್ಞಾನುಸಾರ ಶ್ರೀಮಠದಲ್ಲಿ ಏಳು ದಿನಗಳ ಕಾಲ ಹುಬ್ಬಳ್ಳಿಯ ಪ್ರವಚನ ಪಂ. ಗೋಪಿನಾಥಾಚಾರ್ಯ ಗಲಗಲಿ ಅವರಿಂದ ಒಂದು ವಾರದ ಕಾಲ ಹಮ್ಮಿಕೊಂಡು ಬರಲಾಗಿದ್ದ ಪ್ರವಚನ ಕಾರ್ಯಕ್ರಮ ಮಂಗಳಗೊಂಡಿತು.
ಅರ್ಚಕರಾದ ರವಿ ಆಚಾರ್ಯ, ಶ್ರೀಧರಾಚಾರ್ಯ ಯತಿರಾಯರ ವೃಂದಾವನಕ್ಕೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದರು. ಪಂ. ಗೋಪಿನಾಥಾಚಾರ್ಯ ಗಲಗಲಿ ಆಶೀರ್ವಚನ ನೀಡಿ, ಗುರುಸಾರ್ವಭೌಮರು ಜ್ಞಾನ ದೀಪ ಸೂರ್ಯ ಪ್ರಕಾಶಿಸಿದವರು ಎಂದು ಬಣ್ಣಿಸದರಲ್ಲದೇ, ಭಕ್ತರು ಭಕ್ತಿಯಿಂದ ಕರೆದಲ್ಲಿ ರಾಯರು ಖಂಡಿತವಾಗಿ ಬರುವರು. ಗುರುರಾಯರು ಅನೇಕರ ಮೇಲೆ ದಯೆ ತೋರಿಸಿರುವರು ಎಂದರು.
ಗೋರಖಪುರ ಸಂಪ್ರದಾಯದ ಭಿಕ್ಷುಕನ ಕಥೆಯನ್ನು ಮೂಲವಾಗಿಟ್ಟುಕೊಂಡ ರಚಿಸಿದ ಅಲಖ್ ನಿರಂಜನ ಕಾವ್ಯವನ್ನು ವಿವರಿಸಿ, ಆಧ್ಯಾತ್ಮ ಪರಂಪರೆ ಜೀವಂತವಾಗಿರಿಸಿಕೊಂಡಲ್ಲಿ ಸಾಧು ಸಂತರ ಪ್ರಯತ್ನ ಶ್ಲಾಘನೀಯ ಎಂದರು.
ಪ್ರವಚನ ಸಪ್ತಾಹದ ಸೇವೆಗೈದ ಹುಬ್ಬಳ್ಳಿಯ ಆನಂದರಾವ ನಾಯಕ ಹಾಗೂ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ದಂಪತಿ ಪಂ. ಗೋಪಿನಾಥಾಚಾರ್ಯ ಗಲಗಲಿ ಅವರಿಗೆ ಗುರುಕಾಣಿಕೆ ನೀಡಿ ಗೌರವಿಸಿದರು.
ಗೋಪಾಲ ನಾಯಕ ಮಾತನಾಡಿ, ನಂಜನಗೂಡು ಮಠ ಸ್ಥಾಪನೆ, ನಡೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಗುರುರಾಯರು ತಮ್ಮ ಜೀವಿತದ ಅವಧಿಯಲ್ಲಿ ವಿಜಯಪುರಕ್ಕೆ ಕೃಷ್ಣೆಯ ತಟದಲ್ಲಿ ಬಂದು ಹೋಗಿದ್ದರು ಎಂಬ ವಿಷಯದ ಕುರಿತು ಪ್ರಸ್ತಾಪಿಸಿದರು.
ಪಂ. ಮಧ್ವೇಶಾಚಾರ್ಯ ಜೋಶಿ (ಮುತ್ತಗಿ) ಪ್ರಶ್ನೋತ್ತರ ನಡೆಸಿದರು. ಪಂ. ಪ್ರಣವಾಚಾರ್ಯ ಕಟ್ಟಿ ಮಾತನಾಡಿದರು. ದೇವರ ಹಿಪ್ಪರಗಿಯ ಗುರುರಾಜ ಕುಲಕರ್ಣಿ ಕುಟುಂಬ ವರ್ಧಂತಿ ಉತ್ಸವದ ಸೇವೆ ಸಲ್ಲಿಸಿದರು.
ವಾಮನರಾವ ದೇಶಪಾಂಡೆ, ವಿ.ಬಿ. ಕುಲಕರ್ಣಿ, ವಿಜಯೀಂದ್ರ ಜೋಶಿ, ಶ್ರೀಕೃಷ್ಣ ಪಡಗಾನೂರ, ಅಶೋಕ ತಾವರಗೆರಿ, ಪ್ರಕಾಶ ಬಿಜಾಪುರ, ಬಿ.ಜಿ. ಜೋಶಿ, ಶ್ರೀಧರ ಹರಿದಾಸ, ಶ್ರೀಧರ ಜೋಶಿ (ಮುತ್ತಗಿ), ಪ್ರದೀಪ ಪಾಟೀಲ, ಭೀಮಣ್ಣ ಹೆಗಡಿಹಾಳ, ಪಿ.ಬಿ. ಕುಲಕರ್ಣಿ, ಎಂ.ಜಿ. ದೇಶಪಾಂಡೆ. ಅರುಣ ತೊರವಿ, ಗೋವಿಂದ ಸವದತ್ತಿ, ಡಿ.ಆರ್. ನಾಡಿಗ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net