ಈಗಾಗಲೇ ಜಿಲ್ಲಾಧಿಕಾರಿ, ಪ್ರಧಾನ ಕಾರ್ಯದರ್ಶಿ ಒಳಗೊಂಡು ಎಲ್ಲರಿಗೂ ಈ ಕುರಿತು ಮನವರಿಕೆ ಮಾಡಲಾಗಿದೆ. ಕೇಬಲ್, ನೀರಿನ ಪೈಪ್‌ಲೈನ್ ಸೇರಿ ಹಲವು ಮೂಲ ಸೌಕರ್ಯಗಳನ್ನು ಸ್ಥಳಾಂತರಿಸಬೇಕಿದೆ. ಅದಕ್ಕಾಗಿ ಸ್ಥಳೀಯ ಆಡಳಿತ ಅನುದಾನ ಮೀಸಲಿಡಬೇಕು. ಅನ್ಯರಾಜ್ಯಗಳಲ್ಲೆಲ್ಲ ಆಯಾ ಸ್ಥಳೀಯ ಸರ್ಕಾರವೇ ನೋಡಿಕೊಂಡಿದೆ. ಆದರೆ, ಇಲ್ಲಿ ಮಾತ್ರ ಕೇಂದ್ರವೇ ಆ ಕಾರ್ಯ ಮಾಡಬೇಕೆಂಬ ಗೊಡ್ಡು ವಾದ ಹಾಕಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೇಂದ್ರದ ಅನುದಾನ ವಾಪಸ್ ಆಗಲಿದ್ದು, ಸಂಚಾರ ದಟ್ಟಣೆ ಸಮಸ್ಯೆ ಶಾಶ್ವತವಾಗಿ ಉಳಿಯಲಿದೆ. ಹೀಗಾಗಿ ಸಾರ್ವಜನಿಕರು ಸ್ಥಳೀಯ ಸರ್ಕಾರದ ಮೂಗು ಹಿಂಡಿ ಕೆಲಸ ಮಾಡಿಸಿಕೊಳ್ಳಬೇಕೆಂದರು.