ಪ್ರಾಧ್ಯಾಪಕರ ಅನುಭವ-ಪಾಲಕರ ಬೆವರಿನ ಶ್ರಮ ಸಾಧನೆಗೆ ಬಳಸಿಕೊಳ್ಳಿ, ವಿದ್ಯಾರ್ಥಿಗಳಿಗೆ ರಮೇಶ ಹಾದಿಮನಿ ಕಿವಿಮಾತು

ವಿಜಯಪುರ ನಗರದ ನವಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 2025-26ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ, ಸ್ನಾತಕ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ರಮೇಶ ಹಾದಿಮನಿ, ಪ್ರಾಂಶುಪಾಲ ಡಾ.ಎ.ಐ. ಹಂಜಗಿ, ಎಂ.ಎನ್. ದಿಂಡೂರ ಇತರರಿದ್ದಾರೆ.
ವಿಜಯಪುರ ನಗರದ ನವಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 2025-26ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ, ಸ್ನಾತಕ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ರಮೇಶ ಹಾದಿಮನಿ, ಪ್ರಾಂಶುಪಾಲ ಡಾ.ಎ.ಐ. ಹಂಜಗಿ, ಎಂ.ಎನ್. ದಿಂಡೂರ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಕ್ರಮ
  • ಪಠ್ಯೇತರ ಚಟುವಟಿಕೆಗಳ ಸಮಾರೋಪ
ವಿಜಯಪುರ: ದೇಶದ ಭವಿಷ್ಯ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ಭವ್ಯ ಭಾರತದ ನಿರ್ಮಾಣಕ್ಕಾಗಿ ಇಂದಿನ ಯುವ ಪೀಳಿಗೆ ಸಂಕಲ್ಪತೊಟ್ಟು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಬೇಕಿದೆ. ವಿದ್ಯಾರ್ಥಿಗಳು ಪ್ರಾಧ್ಯಾಪಕರ ಅನುಭವ ಮತ್ತು ಪಾಲಕರ ಬೆವರಿನ ಶ್ರಮ ಸಾಧನೆಗಾಗಿ ಬಳಸಿಕೊಳ್ಳಬೇಕೆಂದು ಗೆಜ್ಜಿ ಕರಿಯರ್ ಅಕಾಡೆಮಿ
ಉಪನ್ಯಾಸಕ ರಮೇಶ ಹಾದಿಮನಿ ಹೇಳಿದರು.

ನಗರದ ನವಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ 2025-26ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ, ಸ್ನಾತಕ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕಗಳ, ಪತ್ರಿಕೆಗಳ ಓದು ಹೆಚ್ಚು ಮಾಡಿ. ಸಂಸ್ಕಾರ, ಶಿಸು,್ತ ವಿನಯ, ಕಠಿಣ ಪರಿಶ್ರಮ ರೂಢಿಸಿಕೊಳ್ಳಿ. ಅಂದಾಗ ಸಾಧನೆ ಸಾಧ್ಯ ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಎಂ.ಎನ್. ದಿಂಡೂರ ಮಾತನಾಡಿ, ಸಾಧನೆಗೆ ಸತತ ಪ್ರಯತ್ನ ತುಂಬಾ ಮುಖ್ಯ. ಶ್ರದ್ಧೆಯಿಂದ ಓದಿ ಗುರಿಯೆಡೆಗೆ ಸಾಗಿ. ಸಾಧನೆಗೆ ಬಡತನ ಎಂದೂ ಅಡ್ಡಿಯಾಗದು ಎಂದರು.
ಸುಮಂಗಲಾ ಕೋಟಿ ಮಾತನಾಡಿ, ವಿದ್ಯಾರ್ಥಿನಿಯರು ಸರ್ಕಾರದ ಯೋಜನೆಗಳ ಕುರಿತು ತಿಳಿದುಕೊಂಡು ಅವುಗಳ ಸದ್ಭಳಿಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎ.ಐ. ಹಂಜಗಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಶಿಸ್ತು ಪಾಲನೆಗಾಗಿ ಹೆಚ್ಚು ಒತ್ತು ನೀಡಲಾಗುತ್ತಿದ್ದು, ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಸಿಕೊಳ್ಳುವುದರೊಂದಿಗೆ ತಮ್ಮ ಪಾಲಕರ ಕನಸು ಸಕಾರಗೊಳಸಿ ಎಂದು ಹೇಳಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಡಾ. ಚಂದ್ರಕಾಂತ ಬಂಡೆಪ್ಪಾ ವರದಿ ವಾಚಿಸಿದರು.
ಸದಾಶಿವ ಗುಡ್ಡೊಡಗಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಸಂಗಮೇಶ ಗುರವ, ವಿದ್ಯಾರ್ಥಿಕಲ್ಯಾಣ ಅಧಿಕಾರಿ ಡಾ. ವಿಶಾಲಾಕ್ಷಿ ಹೊನ್ನಕಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರೊ. ಸುನೀಲ ಹತ್ತಿ, ಡಾ.ಸುನೀಲಡಿ ತೋಂಟಾಪುರ, ಡಾ.ದೇವೆಂದ್ರಗೌಡ ಪಾಟೀಲ, ಪ್ರೊ. ಪ್ರಕಾಶ ಹಾವೇರಿಪೆಠ, ಡಾ. ಮಮತಾ ಬನ್ನೂರ, ವಿದ್ಯಾರ್ಥಿಗಳ ಪ್ರತಿನಿಧಿ ಪೂಜಾ ರಾಠೋಡ ಉಪಸ್ಥಿತರಿದ್ದರು.
ಡಾ. ಶಿವಾನಂದ ಜಮಾದಾರ ನಿರೂಪಿಸಿದರು. ಡಾ. ಕೇಶವಮೂರ್ತಿ ವಂದಿಸಿದರು. ಶೈಕ್ಷಣಿಕ ಸಾಲಿನಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net