ಪರಿಹಾರ ನೀಡದ ಯುಕೆಪಿ, ನ್ಯಾಯಾಲಯದ ಆದೇಶದಂತೆ ಪೀಠೋಪಕರಣ ಜಫ್ತು

ಬಾಗಲಕೋಟೆಯ ಯುಕೆಪಿ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಆದೇಶದಂತೆ ಜಫ್ತು ಮಾಡಿಕೊಳ್ಳಲಾಯಿತು. ನ್ಯಾಯವಾದಿ ಆನಂದ ಎಸ್. ದೊಡ್ಡಮನಿ, ರೈತ ಆಕಾಶ ಗಿರೆಪ್ಪ ಗುಗ್ಗರಿ ಇದ್ದಾರೆ.
ಬಾಗಲಕೋಟೆಯ ಯುಕೆಪಿ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಆದೇಶದಂತೆ ಜಫ್ತು ಮಾಡಿಕೊಳ್ಳಲಾಯಿತು. ನ್ಯಾಯವಾದಿ ಆನಂದ ಎಸ್. ದೊಡ್ಡಮನಿ, ರೈತ ಆಕಾಶ ಗಿರೆಪ್ಪ ಗುಗ್ಗರಿ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್ ಆದೇಶ ಧಿಕ್ಕರಿಸಿದ ಹಿನ್ನೆಲೆ
  • ಬಾಗಲಕೋಟೆಯಲ್ಲಿ ಪೀಠೋಪಕರಣ ಜಫ್ತಿ
  • ಎಂಟು ವಾರಗಳ ಗಡುವು ಮೀರಿದ ಕಾರಣ
ವಿಜಯಪುರ: ರೈತರಿಗೆ ಭೂ-ಪರಿಹಾರ ಧನ ಭರಣಾ ಮಾಡದೇ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವ ಬಾಗಲಕೋಟೆಯ ಯುಕೆಪಿ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ಜಫ್ತು ಮಾಡಲಾಗಿದೆ.
ರೈತ ಆಕಾಶ ಗಿರೆಪ್ಪ ಗುಗ್ಗರಿ ಎಂಬುವರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ವಾರದಲ್ಲಿ ರೈತನಿಗೆ ಪರಿಹಾರ ಧನ ಭರಣಾ ಮಾಡಬೇಕೆಂದು ಕಲಬುರಗಿ ಹೈಕೋರ್ಟ್ ನ್ಯಾಯಾಲಯ ಆದೇಶಿಸಿತ್ತು. ಆದರೆ, ಪರಿಹಾರ ಧನ ಪಾವತಿಸದೇ ಕೋರ್ಟ್ ಆದೇಶವನ್ನು ಧಿಕ್ಕರಿಸಲಾಗಿತ್ತು. ಹೀಗಾಗಿ ಜಿಲ್ಲಾ ಮೂರನೇ ಹೆಚ್ಚುವರಿ ದಿವಾಣಿ ಮತ್ತು ಸತ್ರ ನ್ಯಾಯಾಧೀಶರ ದರಖಾಸ್ತ್ ಪ್ರಕರಣದ ಆದೇಶದಂತೆ ಜು. 24 ರಂದು ಬಾಗಲಕೋಟೆಯಲ್ಲಿರುವ ಯುಕೆಪಿ ಕಚೇರಿಯ ಪೀಠೋಪಕಣಗಳನ್ನು ಜಫ್ತು ಮಾಡಲಾಯಿತು.
ಜಫ್ತು ಮಾಡಲಾದ ಪೀಠೋಪಕರಣಗಳನ್ನು ನ್ಯಾಯಾಲಯದ ವ್ಯಾಪ್ತಿಗೆ ಕೊಡಲಾಯಿತು ಎಂದು ನ್ಯಾಯವಾದಿ ಸಂಗಮೇಶ ಎಸ್ ಡೊಂಗರವಾಗಿ ಮತ್ತು ಆನಂದ ಎಸ್. ದೊಡ್ಡಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net