ಸಹೋದರರಿಬ್ಬರು ಅಗ್ನಿವೀರರಾಗಿ ಆಯ್ಕೆ

ರವಿಕುಮಾರ  ಸೂರ್ಯಕಾಂತ
ರವಿಕುಮಾರ ಸೂರ್ಯಕಾಂತ
Published on
ರೇವತಗಾಂವ: ಗ್ರಾಮದ ರೈತ ಪ್ರಕಾಶ ಮಾಳಿಯವರ ಇಬ್ಬರು ಮಕ್ಕಳಾದ ರವಿಕುಮಾರ ಮತ್ತು ಸೂರ್ಯಕಾಂತ ಅಗ್ನಿವೀರರಾಗಿ ಆಯ್ಕೆಯಾಗಿ, ತರಬೇತಿಗೆ ಹೋಗುತ್ತಿರುವುದು ಹೆಮ್ಮೆ ವಿಷಯವಾಗಿದೆ. ತರಬೇತಿಯ ನಂತರ ಅವರು ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗಲಿದ್ದಾರೆ.
ದೇಶ ರಕ್ಷಣೆಯಿಗಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ. ದೇಶ ಸೇವೆ ಮಾಡುವ ಮನೋಭಾವ ಎಲ್ಲ ಯುವಕರಲ್ಲೂ ಮೂಡಬೇಕು ಎಂದು ರವಿಕುಮಾರ, ಸೂರ್ಯಕಾಂತ ಹೇಳಿದ್ದಾರೆ.
ಯುವಕರ ಸಾಧನೆಗೆ ಗ್ರಾಮದಲ್ಲಿ ಸಂತಸ ವಾತಾವರಣ ಮೂಡಿದ್ದು, ಗ್ರಾಮಸ್ಥರು ಶುಭ ಹಾರೈಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net