ಕ್ಷಯ ರೋಗ ನಿರ್ಮೂಲನೆ ಜಾಗೃತಿ ಜಾಥಾ

ತಾಳಿಕೋಟೆ ಪಟ್ಟಣದಲ್ಲಿ ಕ್ಷಯರೋಗ ನಿರ್ಮೂಲನಾ ಜಾಗೃತಿ ಜಾಥಾ ನಡೆಯಿತು.
ತಾಳಿಕೋಟೆ ಪಟ್ಟಣದಲ್ಲಿ ಕ್ಷಯರೋಗ ನಿರ್ಮೂಲನಾ ಜಾಗೃತಿ ಜಾಥಾ ನಡೆಯಿತು.
Published on
ತಾಳಿಕೋಟೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾಗ್ಯವಂತಿ ನರ್ಸಿಂಗ್ ಕಾಲೇಜ್, ಎಸ್‌ವಿಎಂ ಪ್ಯಾರಾ ಮೆಡಿಕಲ್ ಇನ್ಸಿಟ್ಯೂಟ್‌ನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕ್ಷಯ ರೋಗ ನಿರ್ಮೂಲನಾ ಜಾಗೃತಿ ಜಾಥಾ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಶ್ರೀಶೈಲ ಹುಕ್ಕೇರಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ೨೦೩೦ಕ್ಕೆ ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟು, ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದರು.
ಶಿವರಾಜಕುಮಾರ ದಿಕ್ಷೀತ್ ಕ್ಷಯರೋಗದ ಲಕ್ಷಣ, ಮುನ್ನೆಚ್ಚರಿಕೆ ಚಿಕಿತ್ಸೆ ಕುರಿತು ವಿವರಿಸಿದರು.
ಐಸಿಟಿಸಿ ಆಪ್ತ ಸಮಾಲೋಚಕಿ ಕಲ್ಪನಾ ಹೂಗಾರ ನಿರೂಪಿಸಿದರು. ಬಸವರಾಜ ಅಗ್ನಿ ಸ್ವಾಗತಿಸಿದರು. ಮಲ್ಲನಗೌಡ ಬಿರಾದಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net