‘ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮಳೆ ಅಭಾವದಿಂದ ಬರದ ತೀವ್ರ ಸ್ಥಿತಿ ಇದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯದ ವಿಪತ್ತು ಕೋಶದವರು ಕಾಲ-ಕಾಲಕ್ಕೆ ಸ್ಯಾಟ್‌ಲೈಟ್ ಮೂಲಕ ಮಾಹಿತಿ ಪಡೆದು, ಪ್ರತಿವಾರ ವಸ್ತು ಸ್ಥಿತಿಯನ್ನು ಅವಲೋಕಿಸಿ, ಬರದ ತಾಲೂಕುಗಳನ್ನು ಘೋಷಿಸುತ್ತಾರೆ. ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸುವಂತೆ ಸಭೆ ನಡೆಸಿ, ಸರ್ಕಾರಕ್ಕೆ ಮಾಹಿತಿ ನೀಡಿ, ಪತ್ರವನ್ನು ನೀಡಿದ್ದೇನೆ. ಮುಂದಿನ ವಾರಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಆಗಲಿವೆ. ಮೊದಲ ಪಟ್ಟಿ ಬಿಡುಗಡೆ ಆದಾಗ ನನ್ನ ಕ್ಷೇತ್ರವೂ ಸೇರಿರಲಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಸಾಧ್ಯ. ಈ ಎಲ್ಲ ಮಾಹಿತಿಯೂ ಎಲ್ಲ ಶಾಸಕರಿಗೂ ತಿಳಿದಿರುವ ಸಂಗತಿ’ ಎಂದಿದ್ದಾರೆ.