ಈದ್ ಮೆರವಣಿಗೆ ನಿಮಿತ್ತ ಸಂಚಾರ ಮಾರ್ಗ ಬದಲು

 ಡಾ. ಆನಂದ್ ಕೆ.
ಡಾ. ಆನಂದ್ ಕೆ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿಷೇಧಿಸಿ
  • ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಆದೇಶ

ವಿಜಯಪುರ : ನಗರದಲ್ಲಿ ಈದ್-ಮಿಲಾದ್ ಹಬ್ಬದ ಬೃಹತ್ ಮೆರವಣಿಗೆ ನಡೆಯಲಿರುವ ಹಿನ್ನೆಲೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಆ. 25, 26ರಂದು ನಗರದ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಆದೇಶ ಹೊರಡಿಸಿದ್ದಾರೆ.

25ರ ಮಧ್ಯಾಹ್ನ 3ರಿಂದ ರಾತ್ರಿ 8ರ ವರೆಗೆ ಗೋಲಗುಂಬಜ್‌ನಿಂದ ಹಕೀಂ ಚೌಕ್, ಜೆಎಮ್ ರಸ್ತೆ ಮತ್ತು ಅಶ್ರಫುಲ್ಲಾ ಚೌಕ್ ಮುಖಾಂತರ ಮರಾಠಿ ವಿದ್ಯಾಲಯದವರೆಗೆ, ಜಿಲ್ಲಾ ಪಂಚಾಯತ್ ಕ್ರಾಸ್‌ನಿಂದ ಮನಗೂಳಿ ಅಗಸಿ ಮುಖಾಂತರ ಬಾಗಲಕೋಟೆ ಕ್ರಾಸ್‌ವರೆಗೆ, ಕೋರ್ಟ್ ಕ್ರಾಸ್‌ನಿಂದ ಕೇಂದ್ರ ಬಸ್ ನಿಲ್ದಾಣದ ಮುಖಾಂತರ ಬಸವೇಶ್ವರ ಸರ್ಕಲ್‌ವರೆಗೆ, ಅಣ್ಣಾ ಇಡ್ಲಿ ಕ್ರಾಸ್‌ನಿಂದ ಗಾಂಧಿ ಚೌಕ್‌ವರೆಗೆ ಹಾಗೂ ಜೆ.ಸಿ.ಸಿ ಬ್ಯಾಂಕ್ ಕ್ರಾಸ್‌ನಿಂದ ಗಾಂಧಿ ಚೌಕ್‌ವರೆಗೆ, ಕುಲ್ಲೊಳ್ಳಿ ಪೆಟ್ರೋಲ್ ಪಂಪ್‌ನಿಂದ ವಾಜಪೇಯಿ ವೃತ್ತದ ಮುಖಾಂತರ ಬಸವೇಶ್ವರ ಸರ್ಕಲ್ ಕೂಡುವ ರಸ್ತೆಯವರೆಗೆ, ಬಬಲೇಶ್ವರ ನಾಕಾದಿಂದ ಗುಂಡಾ ಬಾವಡಿ ಕ್ರಾಸ್, ಮೀನಾಕ್ಷಿ ಚೌಕ್ ಹಾಗೂ ತಾಜ್ ಬಾವಡಿಯವರೆಗಿನ ಮಾರ್ಗಗಳಲ್ಲೂ ನಿಷೇಧಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ 26ರ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ಸಿಂದಗಿ ಕಡೆಯಿಂದ ಬಿಎಲ್ಡಿಇ ಆಸ್ಪತ್ರೆ, ಆಶ್ರಮ, ಬಂಜಾರ ಕ್ರಾಸ್ ಕಡೆಗೆ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ-52 ರಸ್ತೆ ಮೂಲಕ ಸಂಸ್ಕೃತಿ ಕಾಲೋನಿಯಿಂದ ನಗರ ಪ್ರವೇಶಿಸುವುದು, ಇಂಡಿ ಕಡೆಯಿಂದ ಬರುವ ವಾಹನಗಳು ಜ್ಯೋತಿ ಪೈಪ್ ಫ್ಯಾಕ್ಟರಿ, ಶಾಂತಿನಿಕೇತನ ಶಾಲೆ ರಸ್ತೆ ಮುಖಾಂತರ ಬಿಎಲ್ಡಿಇ ಇಂಜಿನಿಯರಿಂಗ್ ಕಾಲೇಜು ಮಾರ್ಗವಾಗಿ ಪ್ರವೇಶಿಸುವುದು, ಅಥಣಿ ರಸ್ತೆ ಕಡೆಗೆ ಹೋಗುವ ವಾಹನಗಳು ರಿಂಗ್ ರಸ್ತೆ ಬಳಸಬೇಕು, ಮನಗೂಳಿ ಬೈಪಾಸ್‌ನಿಂದ ಬಿದನೂರ ಪೆಟ್ರೋಲ್ ಪಂಪ್, ಮನಗೂಳಿ ಬೈಪಾಸ್ ವಾಹನಗಳು ರಾಷ್ಟ್ರೀಯ ಹೆದ್ದಾರಿ-52 ಮೂಲಕ ಸಂಸ್ಕೃತಿ ಕಾಲೋನಿ ಮಾರ್ಗವಾಗಿ ಸಾಗಬೇಕು, ಬಾಗಲಕೋಟೆ ಮತ್ತು ಜಮಖಂಡಿ ಕಡೆಯ ವಾಹನಗಳು ಇಟಗಿ ಪಂಪ್, ಇಟ್ಟಂಗಿಹಾಳ ನಾಕಾ ಮುಖಾಂತರ ಬಿ.ಎಂ. ಪಾಟೀಲ್ ಸರ್ಕಲ್ ಕಡೆಯಿಂದ ನಗರ ಪ್ರವೇಶಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ, ಸುಗಮ ಸಂಚಾರಕ್ಕೆ ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net