ಇಂದು ಕಾಯಕ ಜೀವಿಗಳಿಗೆ ಸನ್ಮಾನ

ಇಂದು ಕಾಯಕ ಜೀವಿಗಳಿಗೆ ಸನ್ಮಾನ
ಇಂದು ಕಾಯಕ ಜೀವಿಗಳಿಗೆ ಸನ್ಮಾನ
Published on
ವಿಜಯಪುರ : ಸಮಾಜ ವಿಜ್ಞಾನ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ) ಜಿಲ್ಲಾ ಘಟಕ, ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟ ಹಾಗೂ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೇ 1ರಂದು ಸಂಜೆ 5.30ಕ್ಕೆ ನಗರದ ಲಾಲ್ ಬಹದ್ದೂರ ಶಾಸಿö ಮಾರುಕಟ್ಟೆ ಪ್ರಾಂಗಣದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾಯಕ ಜೀವಿಗಳಿಗೆ ಗೌರವ ಸನ್ಮಾನ ನಡೆಯಲಿದೆ.
ರಾಜಕೀಯ ಧುರೀಣರಾದ ರಿಯಾಜ್ -ಫಾರುಕಿ ಕಾರ್ಯಕ್ರಮ ಉದ್ಘಾಟಿಸುವರು. ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ ರಡ್ಡಿ ಜ್ಯೋತಿ ಬೆಳಗಿಸುವರು.
ಮುಖ್ಯ ಅತಿಥಿಗಳಾಗಿ ವೈಜನಾಥ ಕರ್ಪೂರಮಠ, ಪೀಟರ್ ಅಲೆಕ್ಝಾಂಡರ್, ಜಿ.ಡಿ. ಕೋಟ್ನಾಳ, ಜೆ.ಎಸ್. ಪಾಟೀಲ, ಬಸವರಾಜ ಜಾಲವಾದಿ, ಅನೀಲ ಹೊಸಮನಿ, ಸುರೇಶ ಜೀಬಿ, ಚಂದ್ರಶೇಖರ ಘಂಟೆಪ್ಪಗೋಳ, ಅಪ್ಪಾಸಾಹೇಬ ಯರನಾಳ, ಪ್ರಭುಗೌಡ ಪಾಟೀಲ, ಲಕ್ಷ್ಮಣ ಹಂದ್ರಾಳ, ಶ್ರೀನಾಥ ಪೂಜಾರಿ, ಅಕ್ರಮ ಮಾಶ್ಯಾಳಕರ, ವಿನೋದ ಖೇಡ, ಎಂ.ಎಂ. ಖಲಾಸಿ, ಭೋಗೇಶ ಸೋಲಾಪುರ, -Àಯಾಜ್ ಕಲಾದಗಿ, ಸುರೇಖಾ ರಜಪೂತ, ನೀಲಾಂಬಿಕಾ ಬಿರಾದಾರ ಆಗಮಿಸಲಿದ್ದಾರೆ ಎಂದು ಸುರೇಶ ಬಿಜಾಪುರ, ಶೇಷರಾವ ಮಾನೆ ಹಾಗೂ ದತ್ತು ಪೂಜಾರಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net