ತಾಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀನಿವಾಸ ತಳವಾರ ಎಂಬ ರೈತನ ಮನೆ ಮುಂದೆ ಕಟ್ಟಿರುವ ಕುರಿಯನ್ನು ಬಿಚ್ಚಿ ಕಳ್ಳರು ದ್ವಿಚಕ್ರ ವಾಹನ ಮೇಲೆ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ರೈತ ಶ್ರೀನಿವಾಸ ಕೂಡಲೇ ಅವರ ಬೆನ್ನಟ್ಟಿದಾಗ ಇಂಡಿ ನಗರದ ಅಗ್ನಿಶಾಮಕ ಠಾಣೆ ಬಳಿ ಕುರಿ ಬಿಟ್ಟು ಪರಾರಿಯಾಗಿದ್ದಾರೆ. ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.