ವೇದೋಪನಿಷತ್ತುಗಳು ಸ್ವದೇಶಿ ಸಂಸ್ಕೃತಿ ಮೂಲ ಬೇರು

ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಲ್ಪಾ ಭಸ್ಮೆ ಉಪನ್ಯಾಸ ನೀಡಿದರು. ವಿ.ಸಿ.ನಾಗಠಾಣ ಇದ್ದಾರೆ.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಲ್ಪಾ ಭಸ್ಮೆ ಉಪನ್ಯಾಸ ನೀಡಿದರು. ವಿ.ಸಿ.ನಾಗಠಾಣ ಇದ್ದಾರೆ.
Published on
ವಿಜಯವಾಣಿ ಸುದ್ದಿಜಾಲ,ವಿಜಯಪುರ
ವೇದೋಪನಿಷತ್ತುಗಳು ಭಾರತೀಯ ಸಂಸ್ಕೃತಿಯ ಮೂಲ ಬೇರು. ಹಾಗೆಯೇ ಮಹಾಲಿಂಗರಂಗರ ಅನುಭವಾಮೃತವು ವೇದೋಪನಿಷತ್ತುಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾಲಿಂಗ ರಂಗರ ಅನುಭವಾಮೃತದ ಆರನೇ ಅಧ್ಯಾಯವಾದ ಸಪ್ತ ಭೂಮಿಕಿಗಳ ಅಭ್ಯಾಸದ ವಾಸನಾ ಕ್ಷಯ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಲೌಕಿಕ ಆಸೆಗಳು, ಮನಸ್ಸಿನ ಕಲ್ಮಶಗಳು, ಇಂದ್ರಿಯಗಳ ಆಕರ್ಷಣೆಗಳನ್ನು ಸಂಪೂರ್ಣವಾಗಿ ನಶಿಸುವಂತೆ ಮಾಡುವುದೇ ವಾಸನಾ ಕ್ಷಯವಾಗಿದೆ. ಇದು ಪರಮ ಶಾಂತಿಯ ಸ್ಥಿತಿಯಾಗಿದೆ ಎಂದು ಅವರು ಹೇಳಿದರು.
ಗತಕಾಲದ, ಭವಿಷ್ಯತ್ಕಾಲದ, ವರ್ತಮಾನ ಕಾಲದ ವಿರುದ್ಧವಾಗಿ ನಾವು ಮಾಯಾ ಸೃಷ್ಠಿಯನ್ನು ನೋಡಿಯೂ ಅದು ಸುಳ್ಳೆಂದು ಭಾವಿಸುವುದು ಮತ್ತು ಭ್ರಾಂತಿ ತೊರೆಯುವುದೇ ನಾಲ್ಕನೆಯ ಭೂಮಿಕೆ ಆಗಿದೆ. ವಿವಿಧ ಬಗೆಯ ವಾಸನೆಗಳಿಗೆ ಅಂಟಿಕೊಂಡಿರುವ ನಮ್ಮ ಮನಸ್ಸನ್ನು ಯೋಗಭ್ಯಾಸದಿಂದ ದೂರ ಮಾಡಿ ಚಿನ್ಮಯ ರೂಪನಾದ ಆತ್ಮನಲ್ಲಿ ಮನಸ್ಸನ್ನು ಲೀನಗೊಳಿಸುವುದೇ ನಿರ್ವಾಸನೆ ಎಂಬ ನಾಲ್ಕನೆಯ ಭೂಮಿಕೆ ಆಗಿದೆ ಎಂದು ಅವರು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ. ನಾಗಠಾಣ ಸ್ವಾಗತಿಸಿದರು. ಮಾಧವಾನಂದ ಸ್ವಾಮೀಜಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net