ಸತ್ಯದ ಹಾದಿಯಲ್ಲಿರುವವನೇ ನಿಜವಾದ ನಾಯಕ

ವಿಜಯಪುರದ ಸೇಂಟ್ ಜೋಸೆ-ï ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಪ್ರತಿನಿಽಗಳ ಪದಗ್ರಹಣ ಸಮಾರಂಭ ನಡೆಯಿತು. ಸಂಗಮೇಶ ಬಬಲೇಶ್ವರ, ಭೀರಪ್ಪ ಕೋಟಿ, ಶಾಜು ಜೊಸೇಫ್ ಮತ್ತಿತರರಿದ್ದಾರೆ.
ವಿಜಯಪುರದ ಸೇಂಟ್ ಜೋಸೆ-ï ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಪ್ರತಿನಿಽಗಳ ಪದಗ್ರಹಣ ಸಮಾರಂಭ ನಡೆಯಿತು. ಸಂಗಮೇಶ ಬಬಲೇಶ್ವರ, ಭೀರಪ್ಪ ಕೋಟಿ, ಶಾಜು ಜೊಸೇಫ್ ಮತ್ತಿತರರಿದ್ದಾರೆ.
Published on

ವಿಜಯಪುರ:

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿಯ ಮನೋಭಾವ, ಆತ್ಮವಿಶ್ವಾಸ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸುವುದು ವಿದ್ಯಾರ್ಥಿ ಪ್ರತಿನಿಽಗಳ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ರಾಜ್ಯ ಬಾಲ ವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಇಲ್ಲಿನ ವಜ್ರಹನುಮಾನ ನಗರದ ಸೇಂಟ್ ಜೋಸೆ-ï ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಪ್ರತಿನಿಽಗಳ ಪದಗ್ರಹಣ ಸಮಾರಂಭದಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಽಗಳಿಗೆ ಪ್ರತಿಜ್ಞಾವಿಽ ಬೋಽಸಿ ಅವರು ಮಾತನಾಡಿದರು.
ಜೀವನದಲ್ಲಿ ಸತ್ಯದ ಹಾದಿಯಲ್ಲಿ ನಡೆಯುವವರು, ಸಮಾಜಕ್ಕೆ ಒಳಿತನ್ನು ಮಾಡಲು ಬಯಸುವವರು, ಇತರರಿಗೆ ಮಾದರಿಯಾಗಿ ಬದುಕಲು ಪ್ರಯತ್ನಿಸುವವರು ನಿಜವಾದ ನಾಯಕರು. ನಾಯಕತ್ವ ಎಂದರೆ ಕೇವಲ ಒಂದು ಹುದ್ದೆ ಅಥವಾ ಬ್ಯಾಡ್ಸ್ ಧರಿಸುವುದಲ್ಲ.
ನಾಯಕತ್ವ ಎಂದರೆ ಜವಾಬ್ದಾರಿ, ಸೇವೆ, ಪ್ರಾಮಾಣಿಕರೆ, ಶಿಸ್ತು ಮತ್ತು ಇತರರಿಗೆ ಮಾದರಿಯಾಗುವ ಗುಣ ಎಂದು ಅವರು ತಿಳಿಸಿದರು.
ಇಂದು ವಿದ್ಯಾರ್ಥಿಗಳು ವಿವಿಧ ನಾಯಕತ್ವದ ಜವಾಬ್ದಾರಿಗಳನ್ನು ಸ್ವೀಕರಿಸುತ್ತಿದ್ದು, ಈ ಜವಾಬ್ದಾರಿಯನ್ನು ಅವರು ಹೆಮ್ಮೆಯಿಂದ ಮಾತ್ರವಲ್ಲದೆ, ವಿನಯ ಮತ್ತು ಕರ್ತವ್ಯ ಪ್ರe್ಞೆಯಿಂದ ನಿರ್ವಹಿಸಬೇಕು ಎಂದರಲ್ಲದೆ, ನಿಮ್ಮ ಕಣ್ಣುಗಳಲ್ಲಿ ಕಾಣುವ ಆತ್ಮವಿಶ್ವಾಸ, ನಿಮ್ಮ ಮುಖದಲ್ಲಿರುವ ನಗು ಮತ್ತು ನಿಮ್ಮ ಹೃದಯದಲ್ಲಿರುವ ಕನಸುಗಳೇ ನಿಮ್ಮ ಭವಿಷ್ಯದ ಶಕ್ತಿಯಾಗಲಿ ಸಂಗಮೇಶ ಬಬಲೇಶ್ವರ ಶುಭ ಹಾರೈಸಿದರು.
ಜಲನಗರದ ಪೊಲೀಸ್ ಠಾಣೆಯ ಪಿಎಸ್‌ಐ ಭೀರಪ್ಪ ಕೋಟಿ ಮಾತನಾಡಿ, ನಾಯಕತ್ವ ಮತ್ತು ಆದರ್ಶ ಗುಣಗಳನ್ನು ಸೇಂಟ್ ಜೋಸೆ-ï ಶಾಲೆಯು ಪಠ್ಯಕ್ರಮದ ಕಲಿಕೆಯ ಜತೆಗೆ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಶಾಜು ಜೊಸೇಫ್ ಮಾತನಾಡಿ, ವಿದ್ಯಾರ್ಥಿ ಪ್ರತಿನಿಽಗಳನ್ನು ಆಯ್ಕೆ ಮಾಡುವ ಜತೆಗೆ ಅವರಿಗೆ ಜವಾಬ್ದಾರಿ ಮತ್ತು ಹೊಣೆಗಾರಿಕೆ ನೀಡಲಾಗಿದ್ದು, ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆದು ಪೋಷಿಸುವ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯಸ್ಥೆ ಅನಲೀಸಾ ಬಾಸ್ಕೋ, ಭಾರತಿ ಕರಡಿ, ವಿಜಯಕುಮಾರ ಹಳ್ಳದಮನಿ, ಲೋಕೇಶ ಕಾಂಬಳೆ, ಆನಂದ ಬಿರಾದಾರ, ಶಾರದಾ ಮಾಲಗಾರ, ಜಾವೀದ ಬಾಗಲಕೋಟ, ಸುರೇಖಾ ಜೋಷಿ, ಪುರುಷೋತ್ತಮ ಪಿ. ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net