ಮಹಿಳೆಯರ ರಕ್ಷಣೆ ಅಕ್ಕಪಡೆಯ ಉದ್ದೇಶ

ವಿಜಯಪುರ ನಗರದ ಬನ್ಸಿಲಾಲ ವಿಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಅಕ್ಕ ಪಡೆ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಆರ್.ಕೆ. ಹೂಗಾರ, ಸೀಮಾ ಪಾಟೀಲ, ಎಸ್.ಎಸ್. ನುಚ್ಚಿ ಮತ್ತಿತರರಿದ್ದಾರೆ.
ವಿಜಯಪುರ ನಗರದ ಬನ್ಸಿಲಾಲ ವಿಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಅಕ್ಕ ಪಡೆ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಆರ್.ಕೆ. ಹೂಗಾರ, ಸೀಮಾ ಪಾಟೀಲ, ಎಸ್.ಎಸ್. ನುಚ್ಚಿ ಮತ್ತಿತರರಿದ್ದಾರೆ.
Published on
ವಿಜಯಪುರ: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದೇ ಅಕ್ಕಪಡೆಯ ಉದ್ದೇಶ ಎಂದು ಮಹಿಳಾ ಮುಖ್ಯ ಪೇದೆ ಆರ್.ಕೆ. ಹೂಗಾರ ಹೇಳಿದರು.
ನಗರದ ವಿದ್ಯಾವರ್ಧಕ ಸಂಘದ ಬನ್ಸಿಲಾಲ ವಿಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ಇಲಾಖೆಯ ಅಕ್ಕ ಪಡೆ ಯೋಜನೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ಅಕ್ಕಪಡೆ ರಚಿಸಿದೆ. ಎಲ್ಲಿ ಹೆಣ್ಣು ಮಕ್ಕಳಿಗೆ ದೌರ್ಜನ್ಯ, ಹಿಂಸೆ, ಶೋಷಣೆ ಎದುರಿಸುತ್ತಿರುತ್ತಾರೋ, ಅಲ್ಲಿ ಅಕ್ಕಪಡೆ ರಕ್ಷಣೆ ಒದಗಿಸುವ ಕಾರ್ಯ ಮಾಡುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಸದರಿ ಯೋಜನೆ ಉತ್ತೇಜಿಸುವುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ನಿಮಗೆ ಯಾವುದಾದರೂ ಅಹಿತಕರ ಘಟನೆಗಳು, ದೌರ್ಜನ್ಯ, ಬಾಲ್ಯ ವಿವಾಹ ಅಥವಾ ಕುಟುಂಬ ಸಮಸ್ಯೆಗಳು ಕಂಡುಬಂದಲ್ಲಿ ಅಕ್ಕಪಡೆಯ ಸಹಾಯವಾಣಿಗೆ ಕರೆ ಮಾಡುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕಿ ಸೀಮಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಪಡೆಯ ಹೋಂ ಗಾರ್ಡ್ಸ್ ಎಸ್.ಎಸ್. ನುಚ್ಚಿ, ಎಸ್.ಎಸ್. ಪಾತ್ರೋಟಿ, ಆನಂದ ಕುಲಕರ್ಣಿ, ಸ್ಮೀತಾ ದೇಸಾಯಿ ಮತ್ತಿತರರಿದ್ದರು.
ವಿಜಯಪುರ ನಗರದ ಬನ್ಸಿಲಾಲ ವಿಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಅಕ್ಕ ಪಡೆ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಆರ್.ಕೆ. ಹೂಗಾರ, ಸೀಮಾ ಪಾಟೀಲ, ಎಸ್.ಎಸ್. ನುಚ್ಚಿ ಮತ್ತಿತರರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net