ಪಂಚಮಸಾಲಿ ಸಾಮಾಜ ಆರ್ಥಿಕತೆಯಲ್ಲಿ ಬಡವರು

ಇಂಡಿ ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ  ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ವಿ.ಹೆಚ್. ಬಿರಾದಾರ,  ಸೋಮು ದೇವರ, ನೀಲಕಂಠಗೌಡ ಪಾಟೀಲ ಮತ್ತಿತರರಿದ್ದರು.
ಇಂಡಿ ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ವಿ.ಹೆಚ್. ಬಿರಾದಾರ, ಸೋಮು ದೇವರ, ನೀಲಕಂಠಗೌಡ ಪಾಟೀಲ ಮತ್ತಿತರರಿದ್ದರು.
Published on
ಇಂಡಿ: ಪAಚಮಸಾಲಿ ಸಮಾಜದವರು ರಾಜ್ಯದ ವಿವಿಧೆಡೆ ಲಿಂಗಾಯತ ಉಪಪಂಗಡಗಳಿಗೆ ತಮ್ಮ ಜಮೀನುಗಳನ್ನು ಶಿಕ್ಷಣ ಸಂಸ್ಥೆ ಕಟ್ಟಲು, ಮಠಗಳನ್ನು ಕಟ್ಟಲು ದಾನ ನೀಡಿದ್ದಾರೆ.
ಈಗ ನಮ್ಮ ಸಮಾಜದಲ್ಲಿಯೂ ಬಹಳಷ್ಟು ಜನ ಆರ್ಥಿಕವಾಗಿ ಬಡವರಿದ್ದಾರೆ. ಹೀಗಾಗಿ ಪಂಚಮಸಾಲಿ ಸಮಾಜದ್ದೇ ರಾಜ್ಯಾದ್ಯಂತ ವಸತಿ ನಿಲಯ, ದಾಸೋಹ ನಿಲಯ ಮತ್ತು ಶಾಖಾಮಠ ತೆರೆದು ಸಮಾಜದ ಮಕ್ಕಳಿಗೆ ಅನುಕೂಲ ಕಲ್ಪಿಸಲು ಸಮಾಜ ಬಾಂಧವರು ಮುಂದಾಗಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.
ನಗರದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಸಹ ಶಾಖಾ ಮಠ, ವಸತಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಭಕ್ತರು ಭೂದಾನ ಮಾಡಿದರೆ ಭವನಕ್ಕೆ ಅವರದ್ದೇ ಹೆಸರು ನಾಮಕರಣ ಮಾಡಲು ತಿಳಿಸಿದರು.
ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟುವುದಾದರೆ ಒಂದು ಎಕರೆ ಜಮೀನು ದಾನ ನೀಡುವುದಾಗಿ ಸಾತಲಗಾಂವ ಗ್ರಾಮದ ರಮೇಶ ಬಿರಾದಾರ ಘೋಷಿಸಿದರು. ಅವರನ್ನು ಶ್ರೀಗಳು ಸತ್ಕರಿಸಿ ಗೌರವಿಸಿದರು.
ನಗರದಲ್ಲಿ ದಾನಿಗಳಿಂದ ಅಥವಾ ನಗರಸಭೆಯಿಂದ ಜಮೀನು ಪಡೆಯಲು ೬ ಜನರನ್ನು ಪಂಚಮಸಾಲಿ ಸಮಾಜ ವಸತಿ ನಿಲಯ, ಸಮುದಾಯ ಭವನ ಸ್ಥಳ ಪರಿಶೀಲನಾ ಸಮೀತಿ ರಚಿಸಿ ಸದಸ್ಯರನ್ನಾಗಿ ಭೀಮಾಶಂಕರ ಮುರಗುಂಡಿ, ಶಾಂತುಗೌಡ ಬಿರಾದಾರ, ಸೋಮಶೇಖರ ದೇವರ, ಮಂಜುನಾಥ ಕಾಮಗೊಂಡ, ನಾಗೇಶ ಹೆಗಡ್ಯಾಳ, ರವಿಗೌಡ ಪಾಟೀಲ ಅವರನ್ನು ನೇಮಕ ಮಾಡಲಾಯಿತು.
ಶಿವಾನಂದ ಕಾಮಗೊಂಡ ಅವರನ್ನು ಯುವಘಟಕದ ಅಧ್ಯಕ್ಷರನ್ನಾಗಿ ನೇಮಿಸಿ, ಕಾರ್ಯಾಧ್ಯಕ್ಷರನ್ನಾಗಿ ೭ ಜನರನ್ನು ಆಯ್ಕೆ ಮಾಡಲಾಯಿತು.
ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಮು ದೇವರ, ಶಾಂತೇಶ್ವರ ಸಂಸ್ಥೆಯ ಅಧ್ಯಕ್ಷ ನೀಲಕಂಠಗೌಡ ಪಾಟೀಲ, ಸಮಾಜದ ಪ್ರ. ಕಾರ್ಯದರ್ಶಿ ಶಿವಾನಂದ ಚಾಳೀಕಾರ, ಶಂಕರಗೌಡ ಬಂಡಿ, ಶಿವು ದೇವರ, ದುಂಡು ಮುಜಗೊಂಡ, ಅಪ್ಪು ಹೊಸಮನಿ, ಗಿರಮಲ್ಲಗೌಡ ಬಿರಾದಾರ, ಗಿರೀಶಗೌಡ ಪಾಟೀಲ, ಪ್ರಭು ಹೊಸಮನಿ, ಶ್ರೀಶೈಲಗೌಡ ಪಾಟೀಲ, ಬಾಳು ಮುಳಜಿ, ಉಮೇಶ ಬಳಬಟ್ಟಿ, ಭೀಮಾಶಂಕರ ಆಳೂರ, ಅಣ್ಣಾರಾಯ ಬೊಮ್ಮನಳ್ಳಿ, ಸುದೀರ ಕರಿಕಟ್ಟಿ, ಈರಣ್ಣ ಡಂಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net