ಹೊರ್ತಿ ಸಮೀಪದ ಕಾತ್ರಾಳ, ಬಾಲಗಾಂವ ಗುರುದೇವಾಶ್ರಮದಲ್ಲಿ 7 ದಿನಗಳವರೆಗೆ ನಡೆಯುವ ಆಧ್ಯಾತ್ಮಿಕ, ಗ್ರಾಮೀಣ ಸೊಗಡು, ಸಂಸ್ಕೃತಿ ಹಾಗೂ ಗುರುನಮನ ಕಾರ್ಯಕ್ರಮಕ್ಕೆ ಶರಣರು ಮತ್ತು ಶ್ರೀಗಳು, ಮಹಾರಾಜ ಜೊತೆಯಾಗಿ ಸಿದ್ಧೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಶಿವಾನಂದ ಶರಣರು, ತುಕಾರಾಮ ಮಹಾರಾಜರು, ಅಮೃತಾನಂದ ಸ್ವಾಮೀಜಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕರಜಗಿಯ ಶಿವಾನಂದ ಶರಣರ ಅಭಿಮತ
ಬಾಲಗಾಂವ ಗುರುದೇವ ಆಶ್ರಮದಲ್ಲಿ ಗುರುನಮನ ಕಾರ್ಯಕ್ರಮ ಆಯೋಜನೆ
ಹೊರ್ತಿ: ಸಾರ್ಥಕ ಜೀವನಕ್ಕೆ ಗುರುಸ್ಮರಣೆ ಅವಶ್ಯಕತೆ ಇದೆ ಎಂದು ಕರಜಗಿಯ ಶಿವಾನಂದ ಶರಣರು ಹೇಳಿದರು.
ಸಮೀಪದ ಕಾತ್ರಾಳ, ಬಾಲಗಾಂವ ಗುರುದೇವ ಆಶ್ರಮದಲ್ಲಿ ಗುರುನಮನ ಕಾರ್ಯಕ್ರಮದ ಪ್ರಯುಕ್ತ 7 ದಿನಗಳವರೆಗೆ ನಡೆಯುವ ಆಧ್ಯಾತ್ಮಿಕ, ಗ್ರಾಮೀಣ ಸೊಗಡು, ಸಂಸ್ಕೃತಿ ಹಾಗೂ ಗುರುನಮನ ಮತ್ತು ವಿವಿಧ ಕಾರ್ಯಕ್ರಮಕ್ಕೆ ಸಿದ್ಧೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಉದ್ಘಾಟಿಸಿದರು.
ಗುರುವಿನ ಮಹಿಮೆ ಶ್ರೇಷ್ಠವಾದುದು. ಸಿದ್ಧೇಶ್ವರ ಶ್ರೀಗಳು ಎಲ್ಲರಿಗೂ ಜ್ಞಾನ ದಾಸೋಹ ನೀಡಿ ಸನ್ಮಾರ್ಗದ ದಾರಿ ತೋರಿದ್ದಾರೆ. ಅವರ ಹಾಕಿ ಕೊಟ್ಟ ಆಚಾರ, ವಿಚಾರದಂತೆ ನಾವೆಲ್ಲರೂ ಸಾಗಿ ಸುಂದರ ಜೀವನ ಕಂಡುಕೊಳ್ಳೋಣ ಎಂದರು.
ಲಮಾನಟ್ಟಿಯ ತುಕಾರಾಮ ಮಹಾರಾಜರು ಮಾತನಾಡಿ, ಗುರುಗಳ ಮಾರ್ಗದರ್ಶನದಿಂದ ಸುಂದರ ಜೀವನ ಕಂಡುಕೊಳ್ಳಲು ಸಾಧ್ಯ, ಸಮಯಕ್ಕೆ ಮಹತ್ವ ನೀಡಬೇಕು ಎಂದರು.
ಸೋನಿಹಾಳದ ಲಾಯಪ್ಪ ಮಹಾ ರಾಜರು ಹಾಗೂ ಸಂಗಡಿಗರು ಭಕ್ತಿ ಪದ ಹಾಡಿದರು. ಕಾತ್ರಾಳ-ಬಾಲಗಾಂವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಇದಕ್ಕೂ ಮುನ್ನ ಶಿವಲಿಂಗೇಶ ಬಾಲಗಾಂವ, ಸಾಯಬಣ್ಣ ಮುಚ್ಚಂಡಿ, ಕಾಶೀರಾಮ ಬಿರಾದಾರ, ರಮೇಶ ಕರೋಸಿ, ಶ್ರೀಕಾಂತ ಹಿರೇಮಠ ಸೇರಿ ಕಾತ್ರಾಳ, ಬಾಲಗಾಂವ ಬೋರ್ಗಿ, ಆಕಳವಾಡಿ, ಬೆಳ್ಳುಂಡಗಿ, ಹಳ್ಳಿ, ಗಿರಗಾಂವ, ಮಾನಿಕನಾಳ ಜೀಗಜಿವಣಿ, ಕನಕನಾಳ, ಇಂಚಗೇರಿ ಇತರರಿದ್ದರು.