ಆಲಮೇಲ ಪಟ್ಟಣದ ಹಜರತ್ ಪೀರ್ ಗಾಲೀಬ ಶಹೀದ್ ದರ್ಗಾದ ಆವರಣದಲ್ಲಿ ಕಾರಹುಣ್ಣಿಮೆಯ ನಿಮಿತ್ತ ದೇಶಮುಖ ಹಾಗೂ ದೇಶಪಾಂಡೆ ಅವರ ಲಕ್ಷ್ಮೀ ಬಂಡಿಗಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾರುಹುಣ್ಣಿಮೆಯ ಲಕ್ಷ್ಮೀ ಬಂಡಿಗಳ ಓಟದ ಸ್ಪರ್ಧೆ
ದೇಶಮುಖ ಹಾಗೂ ದೇಶಪಾಂಡೆ ಅವರ ಲಕ್ಷ್ಮೀ ಬಂಡಿಗಳು ಓಟದ ಸ್ಪರ್ಧೆ
ಆಲಮೇಲ:ಪಟ್ಟಣದಲ್ಲಿ ಸೋಮವಾರ ಐತಿಹಾಸಿಕ ಕಾರುಹುಣ್ಣಿಮೆಯ ಲಕ್ಷ್ಮೀ ಬಂಡಿಗಳ ಓಟದ ಸ್ಪರ್ಧೆ ನಡೆಯಿತು. ಗ್ರಾಮ ದೇವರಾದ ಹಜರತ್ ಪೀರ್ ಗಾಲೀಬ ಶಹೀದ್ ದರ್ಗಾದ ಆವರಣದಲ್ಲಿ ದೇಶಮುಖ ಹಾಗೂ ದೇಶಪಾಂಡೆ ಅವರ ಲಕ್ಷ್ಮೀ ಬಂಡಿಗಳು ಓಟದ ಸ್ಪರ್ಧೆ ಪಾಲ್ಗೊಂಡಿದ್ದವು.
ಕಾರಹುಣ್ಣಿಮೆ ವೀಕ್ಷಿಸಲು ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಸಾವಿರಾರು ವೀಕ್ಷಕರು ನಿಬ್ಬೇರಗಾದರು. ಹಲವು ಚಿಕ್ಕ ಬಂಡಿಗಳಿಂದ ಕೂಡಾ ಓಟದ ಸ್ಪರ್ಧೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ ದೇಶಮುಖ ಹಾಗೂ ದೇಶಪಾಂಡೆಯವರ ವಾಡೆಯಿಂದ ಸಾವಿರಾರು ಜನರ ಮಧ್ಯೆ ಡಾಲ್ಬಿ ಹಾಗೂ ವಾದ್ಯಗಳೊಂದಿಗೆ ಎತ್ತುಗಳನ್ನು ಮಧುವಣಗಿತ್ತಿಯಂತೆ ಶೃಂಗಾರಿಸಿದ ಬಂಡಿಗಳು ದರ್ಗಾದ ಆವರಣಕ್ಕೆ ಬಂದು ಐದು ಸುತ್ತು ಓಟದ ಸ್ಪರ್ಧೆ ನಡೆಸಿದವು. ನಂತರ ಸಂಪ್ರದಾಯದಂತೆ ಪಟ್ಟಣದ ದೇವರ ಅಗಸಿಗೆ ಕಟ್ಟಿರುವ ಬೇವಿನ ತೋರಣ (ಕರಿ) ದೇಶಮುಖರ ಬಂಡಿ ಹರಿದು ಕೊಳ್ಳುವ ಮೂಲಕ ಪುನಃ ಬಂಡಿ ದೇಶಮುಖರ ವಾಡೆಗೆ ತೆರಳಿ ಹರಿದುಕೊಂಡು ಬಂದಿರುವ ಕರಿಯ ಪೂಜೆ ನೆರವೇರಿಸಿ ಸಂಭ್ರಮ ಆಚರಿಸಿದರು.
ಹಿಂದೂ- ಮುಸ್ಲಿಂರು ಸೇರಿಕೊಂಡು ಸುಮಾರು ಐದು ಸಾವಿರಕ್ಕೂ ಅಧಿಕ ವೀಕ್ಷಕರ ಮಧ್ಯೆ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮಾಜಿ ಜಿಪಂ ಸದಸ್ಯ ಬಿ.ಆರ್.ಯಂಟಮನ, ಗ್ಯಾರಂಟಿ ಅಧ್ಯಕ್ಷ ಅಶೋಕ ಕೊಳಾರಿ, ಮಾಜಿ ಗ್ರಾಪಂ ಅಧ್ಯಕ್ಷ ಅಯೂಬ ದೇವರಮನಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲೀಕಾರ, ಬಸವರಾಜ ತೆಲ್ಲೂರ, ಅಹಮದ್ ವಾಲೀಕಾರ ಮತ್ತಿತರರಿದ್ದರು.