ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲ

ಸಿಂದಗಿ ಪಟ್ಟಣದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದ ಕಾರ್ಯಕರ್ತರು, ಲವ್ ಜಿಹಾದ್ ಖಂಡಿಸಿ, ಕಂದಾಯ ಅಧಿಕಾರಿ ರಾಘವೇಂದ್ರ ಕುಲಕರ್ಣಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಶೇಖರಗೌಡ ಹರನಾಳ, ಬಸವರಾಜ ಬಿರಾದಾರ, ಬಸನಗೌಡ ಬನ್ನೆಟ್ಟಿ, ಭೀಮಾಶಂಕರ ರತ್ನಾಕರ ಮತ್ತಿತರರಿದ್ದರು.
ಸಿಂದಗಿ ಪಟ್ಟಣದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದ ಕಾರ್ಯಕರ್ತರು, ಲವ್ ಜಿಹಾದ್ ಖಂಡಿಸಿ, ಕಂದಾಯ ಅಧಿಕಾರಿ ರಾಘವೇಂದ್ರ ಕುಲಕರ್ಣಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಶೇಖರಗೌಡ ಹರನಾಳ, ಬಸವರಾಜ ಬಿರಾದಾರ, ಬಸನಗೌಡ ಬನ್ನೆಟ್ಟಿ, ಭೀಮಾಶಂಕರ ರತ್ನಾಕರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶೇಖರಗೌಡ ಹರನಾಳ
  • ಆರೋಪ
  • ವಿಎಚ್‌ಪಿ-ಬಜರಂಗದಳ
ಸಿಂದಗಿ: ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಎಲ್ಲ ಜಿಲ್ಲೆಗೂ ಹರಡುತ್ತಿದ್ದರೂ, ಸರ್ಕಾರ, ಗೃಹ ಇಲಾಖೆ ಅಗತ್ಯ ಕಾನೂನು ಕ್ರಮ ಕೈಗೊಳ್ಳದೇ ಇರುವುದು, ನಿಷ್ಪಕ್ಷಪಾತದ ತನಿಖೆ ಮಾಡದಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಮುಖಂಡ ಶೇಖರಗೌಡ ಹರನಾಳ ಆರೋಪಿಸಿದರು.
ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು, ಯಲ್ಲಾಪುರದ ದಲಿತ ಹಿಂದೂ ಮಹಿಳೆ ರಂಜಿತಾ ಲವ್ ಜಿಹಾದ್ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿ, ಕಂದಾಯ ಅಽಕಾರಿ ರಾಘವೇಂದ್ರ ಕುಲಕರ್ಣಿ ಅವರ ಮುಖಾಂತರ ರಾಜ್ಯಪಾಲರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು.
ಅಲ್ಲದೆ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರಿಗೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ ರೈತ ಮುಖಂಡರ, ಮಠಾಧೀಶರ, ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣ ರದ್ದುಗೊಳಿಸಿ, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದರು.
ಭೀಮಾಶಂಕರ ರತ್ನಾಕರ ಮಾತನಾಡಿ, ಹಿಂದೂಗಳ ಹತ್ಯೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಯುವತಿಯರ ಅತ್ಯಾಚಾರದಂತಹ ಘಟನೆಗಳು ಹೆಣ್ಣು ಮಕ್ಕಳನ್ನು ಮನೆಯಾಚೆ ಕಳುಹಿಸದಂತೆ ಮಾಡಿದೆ. ಇಂತಹ ಘಟನೆಗಳನ್ನು ನೆರೆ ರಾಷ್ಟ್ರಗಳಲ್ಲಿ ನೋಡುತ್ತಿದ್ದ ನಮಗೆ ರಾಜ್ಯದಲ್ಲಿಯೂ ಮರುಕಳಿಸುತ್ತಿರುವುದು ಮನಕಲಕುವಂತಾಗಿದೆ. ಸರ್ಕಾರ, ಪೊಲೀಸ್ ಇಲಾಖೆ, ಇಂತಹ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಸವರಾಜ ಬಿರಾದಾರ, ವಿಎಚ್‌ಪಿ ನಗರ ಘಟಕ ಅಧ್ಯಕ್ಷ ಬಸನಗೌಡ ಬೆನ್ನಟ್ಟಿ, ನಂದೀಶ ನಂದರಗಿ, ರಾಯಪ್ಪ ಬಡಿಗೇರ, ಪರಶುರಾಮ ಕುಮಸಗಿ, ರಮೇಶ ಗನ್ನಾಪುರ, ದತ್ತು ಹೊಸಮನಿ, ಏಕನಾಥ ದ್ವಾಶ್ಯಾಳ, ಮುಕೇಶ ಬಡಿಗೇರ, ಬಸು ಖಾನಾಪುರ, ಶಿವರಾಜ, ಸಿದ್ದು, ಅನಿಲ, ಚಂದನಗೌಡ, ಜಗದೀಶ, ಬಸನಗೌಡ, ರಮೇಶ, ಹಣಮಂತ, ಲಕ್ಷ್ಮಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net