ಕಾಲಚಕ್ರ ಉರುಳಿ ಇಪ್ಪತ್ತು ವರ್ಷಗಳು ಕಳೆದರೂ ಗುರು-ಶಿಷ್ಯರ ನಡುವಿನ ಪ್ರೀತಿ, ಗೌರವ, ಆತ್ಮೀಯತೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬುದಕ್ಕೆ ಪಟ್ಟಣದ ಶ್ರೀ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 2006-07ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹಮಿಲನ-ಗುರುವಂದನಾ ಕಾರ್ಯಕ್ರಮ ಸಾಕ್ಷಿಯಾಯಿತು.
ಬಸವನಬಾಗೇವಾಡಿ : ಕಾಲಚಕ್ರ ಉರುಳಿ ಇಪ್ಪತ್ತು ವರ್ಷಗಳು ಕಳೆದರೂ ಗುರು-ಶಿಷ್ಯರ ನಡುವಿನ ಪ್ರೀತಿ, ಗೌರವ, ಆತ್ಮೀಯತೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬುದಕ್ಕೆ ಪಟ್ಟಣದ ಶ್ರೀ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 2006-07ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹಮಿಲನ-ಗುರುವಂದನಾ ಕಾರ್ಯಕ್ರಮ ಸಾಕ್ಷಿಯಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರನ್ನು ವೇದಿಕೆಗೆ ಪುಷ್ಪವೃಷ್ಟಿಗೈದು ಸಂಭ್ರಮದಿAದ ಬರಮಾಡಿಕೊಂಡ ದೃಶ್ಯ ಮನಸೂರೆಗೊಂಡಿತು. ಎಲ್ಲರೂ ಕೂಡಿ ತಮ್ಮ ಬಾಲ್ಯದ ಸಿಹಿ-ಕಹಿ ನೆನಪುಗಳನ್ನು ವಿದ್ಯಾರ್ಥಿಗಳು ಮೆಲುಕು ಹಾಕುವ ಮೂಲಕ ತಮ್ಮ ಅನಿಸಿಕೆ ಹಂಚಿಕೊAಡರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಸ್. ಕುದರಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಉಚ್ಛ ಸ್ಥಾನವಿದೆ. ತಾವೆಲ್ಲರೂ ಎರಡು ದಶಕ ಕಳೆದರೂ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿದ್ದು ಸಾರ್ಥಕವೆನಿಸಿದೆ. ನಾವು ಸಮಾಜಕ್ಕೆ ಉತ್ತಮ ಸುಸಂಸ್ಕೃತ ಪ್ರಜೆಗಳನ್ನು ನೀಡಿದ್ದೇವೆ ಎಂಬ ಆತ್ಮತೃಪ್ತಿ ಸಿಕ್ಕಿತು ಎಂದು ಭಾವುಕರಾದರು.
ನಿವೃತ್ತ ಶಿಕ್ಷಕ ಎಂ.ಎಸ್. ಝಳಕಿ ಮಾತನಾಡಿ, ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅಪಾರ ಸಂತಸ ತಂದಿದೆ. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಶಿಕ್ಷಕ ಕೆ.ಎಸ್. ಕಾಖಂಡಕಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳಲ್ಲಿರುವ ಗುರು-ಶಿಷ್ಯರ ಬಾಂದವ್ಯ, ಮೌಲ್ಯಗಳು ಇಂದಿನ ಜೆನ್-ಜೀ ಪೀಳಿಗೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದರು. ಎಲ್ಲಾ ಶಿಕ್ಷಕರನ್ನು ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.
ಹಳೇ ವಿದ್ಯಾರ್ಥಿಗಳಾದ ಸಾಗರ ಕುಮಾರ ರಾಠೋಡ, ಅಚ್ಯುತ ಕಾಖಂಡಕಿ, ಮಹೇಶ ಬಿರಾದಾರ, ನಿವೇದಿತಾ ಪವಾರ, ಭಾರತಿ ಅವಟಿ, ಸೌಮ್ಯ ದಂಡಿನ್, ಜಗದೀಶ ತಳವಾರ, ಸೇರಿ ತೊಂಬತ್ತಕ್ಕೂ ಅಽಕ ವಿದ್ಯಾರ್ಥಿಗಳಿದ್ದರು.