ಮಹಿಮಾ ಪುರುಷ ಶಿವಯೋಗಿ ಸಿದ್ಧರಾಮರು

ವಿಜಯಪುರದ ಲಿಂಗಾಯತ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಡಾ. ಮಾಧವ ಗುಡಿ ಉಪನ್ಯಾಸ ನೀಡಿದರು. ವಿ.ಸಿ. ನಾಗಠಾಣ, ವಿ.ಡಿ. ಐಹೊಳ್ಳಿ ಮತ್ತಿತರರಿದ್ದಾರೆ.
ವಿಜಯಪುರದ ಲಿಂಗಾಯತ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಡಾ. ಮಾಧವ ಗುಡಿ ಉಪನ್ಯಾಸ ನೀಡಿದರು. ವಿ.ಸಿ. ನಾಗಠಾಣ, ವಿ.ಡಿ. ಐಹೊಳ್ಳಿ ಮತ್ತಿತರರಿದ್ದಾರೆ.
Published on
ವಿಜಯಪುರ: ಬಸವಾದಿ ಶರಣರ ಸಮಕಾಲಿನ ವಚನಕಾರ ಶಿವಯೋಗಿ ಸಿದ್ಧರಾಮರು ಬಾಲ್ಯದಲ್ಲಿಯೇ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡವರು. ದೇವಾಲಯಗಳ ನಿರ್ಮಾಣ, ಕೆರೆ, ಕಟ್ಟೆಗಳ ನಿರ್ಮಾಣ, ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಆದರ್ಶದ ಬದುಕು ಸಾಗಿಸಿದವರು ಎಂದು ಸಾಹಿತಿ ಮಾಧವ ಗುಡಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ೬೯ನೇ ಮಾಸಿಕ ಶಿವಾನುಭವ ಗೋಷ್ಠಿಯ ಅಂಗವಾಗಿ ನಗರದ ಲಿಂಗಾಯತ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ `ಶ್ರೀ ಸಿದ್ಧರಾಮೇಶ್ವರರ ಬದುಕು ಮತ್ತು ಅನುಭಾವ' ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಪಡೆದ ಸಿದ್ಧರಾಮರು ಮಾನವೀಯ ಸಂಬAಧಗಳನ್ನು ಬೆಸೆಯುವಂತಹ ವಚನಗಳನ್ನು ಹಾಗೂ ಜೀವನದ ಮೌಲ್ಯಗಳನ್ನು ಒಳಗೊಂಡ ಬದುಕನ್ನು ಸಾಗಿಸಿದ ಮಹಿಮಾ ಪುರುಷ ಶಿವಯೋಗಿ ಸಿದ್ಧರಾಮರು ಎಂದರು.
ನೂತನ ಬ್ಯಾಕೋಡ ವಚನ ಗಾಯನ ಪ್ರಸ್ತುತ ಪಡಿಸಿದರು. ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಬಸವರಾಜ ಒಂಟಗೋಡಿ ನಿರೂಪಿಸಿದರು. ಎಸ್.ಜಿ. ನಾಡಗೌಡರ ವಂದಿಸಿದರು.
ಮ.ಗು. ಯಾದವಾಡ, ಕೆ.ಎಸ್. ಬಿರಾದಾರ, ಎಚ್.ಎಸ್. ಗಿಡ್ಡಣ್ಣವರ, ಬಸವರಾಜ ಹಿರೇಮಠ, ಎಂ.ಎಸ್. ಝಳಕಿ, ಎಸ್.ಜಿ. ಲಿಂಗದಳ್ಳಿ, ಶಾರದಾ ಕೊಪ್ಪ ಐಹೊಳ್ಳಿ, ಡಾ. ಸುಭಾಸ ಕನ್ನೂರ, ಜಿ.ಆರ್. ಅಂಬಲಿ, ಜಿ.ಬಿ. ಸಾಲಕ್ಕಿ, ಕೆ.ಬಿ. ಅಣೆಪ್ಪನವರ, ಜಿ.ಬಿ. ಸುಕಾಲಿ, ಸೌದಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net