ಪಂಚ ಗ್ಯಾರಂಟಿ ಯೋಜನೆಯ ಸಂಬAಽತ ಅಽಕಾರಿಗಳು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಜನವರಿ ಮಾಹೆಯವರೆಗೆ 17,99,34,366 ಮಹಿಳೆಯರು ಪ್ರಯಾಣಿಸಿದ್ದು, 607.93 ಕೋಟಿ ರೂ. ವೆಚ್ಚವಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜನವರಿ ಅಂತ್ಯಕ್ಕೆ 4,46,616 ಒಟ್ಟು -Àಲಾನುಭವಿಗಳಿದ್ದು, ಈ ಯೋಜನೆಯಡಿ 538.15 ಕೋಟಿ ರೂ. ಜಮೆಯಾಗಿದೆ. ಯುವ ನಿಽ ಯೋಜನೆಯಡಿ 2025ರ ಡಿಸೆಂಬರ್ ಮಾಹೆಯವರೆಗೆ ಒಟ್ಟು 17,467 ಯುವನಿಧಿ -ಫಲಾನುಭವಿಗಳಾಗಿದ್ದು, ಅವರಿಗೆ 51,78,01,500 ರೂ.ಗಳನ್ನು ನೇರ ವರ್ಗಾವಣೆ (ಡಿ.ಬಿ.ಟಿ) ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.