ಭಾರತ ವಿಶ್ವ ಗುರುವಾಗುವ ದಿನ ದೂರವಿಲ್ಲ, ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತ

ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ದಿನ, ರಕ್ತದಾನ ಶಿಬಿರ ಸೇರಿ ವಿವಿಧ ಅರ್ಥಪೂರ್ಣ ಚಟುವಟಿಕೆಗಳಿಗೆ ಚಾಲನೆ ನೀಡಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡ ಸಂಜೀವ ಐಹೊಳೆ ಇತರರಿದ್ದಾರೆ.
ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ದಿನ, ರಕ್ತದಾನ ಶಿಬಿರ ಸೇರಿ ವಿವಿಧ ಅರ್ಥಪೂರ್ಣ ಚಟುವಟಿಕೆಗಳಿಗೆ ಚಾಲನೆ ನೀಡಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡ ಸಂಜೀವ ಐಹೊಳೆ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವ
  • ಸೇವಾ ಸಂಕಲ್ಪ ದಿನ ಆಚರಣೆಗೆ ಚಾಲನೆ
  • ಕಾರ್ಯಕರ್ತರಿಂದ ರಕ್ತ ದಾನ ಶಿಬಿರ
ವಿಜಯಪುರ: ‘ಪರಿಶುದ್ಧ ಆಡಳಿತದ ಮೂಲಕ ಭಾರತವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಸಮರ್ಥ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿದೆ, ಭಾರತ ವಿಶ್ವ ಗುರುವಾಗುವ ದಿನ ದೂರವಿಲ್ಲ’ ಎಂದು ಸಂಸದ ರಮೇಶ ಜಿಗಜಿಣಗಿ ಹೆಮ್ಮೆಯಿಂದ ನುಡಿದರು.
ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ದಿನ, ರಕ್ತದಾನ ಶಿಬಿರ ಸೇರಿ ವಿವಿಧ ಅರ್ಥಪೂರ್ಣ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಘಟ್ಟದಲ್ಲಿ ದೇಶದ ಜಿಡಿಪಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ, ನೋಟು ಅಮಾನ್ಯೀಕರಣದ ಮೂಲಕ ಕಪ್ಪು ಹಣದ ವಿರುದ್ಧ ಸಮರ, ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ಧತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ವ್ಯಾಕ್ಸೀನ್, ಕೃಷಿಕರಿಗೆ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆ ಜಾರಿ ಹೀಗೆ ಮೋದಿ ಅವರ ಸಾಧನೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ’ ಎಂದರು.
‘70 ವರ್ಷಗಳಿಂದ ಆಳ್ವಿಕೆ ಮಾಡಿದ ಈ ಕಾಂಗ್ರೆಸ್ ಏನೂ ಸಾಧನೆ ಮಾಡಿಲ್ಲ, ಆದರೂ ಹೊಟ್ಟೆಕಿಚ್ಚಿನಿಂದ ಮೋದಿ ಅವರನ್ನು ಟೀಕೆ ಮಾಡುತ್ತದೆ, ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಸಿದುಕೊಳ್ಳುವ ಗ್ಯಾರಂಟಿ ಹಾಗೂ ಹಗರಣಗಳೇ ಕಾಂಗ್ರೆಸ್ ಸರ್ಕಾರದ ಸಾಧನೆಗಳು’ ಎಂದು ಟೀಕಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ‘ನರೇಂದ್ರ ಮೋದಿ ಎಂದರೆ ಒಂದು ಚೈತನ್ಯ, ಹೃದಯದಲ್ಲಿ ಸದಾ ಜನಹಿತ, ಭಾರತ ದೇಶದ ಪ್ರಗತಿಗಾಗಿ ಚಿಂತಿಸುವ ಮೋದಿ ಅವರು ದಿಗ್ಗಜ ನಾಯಕ, ಅನೇಕ ರಾಷ್ಟ್ರಗಳ ರಾಷ್ಟ್ರಾಧ್ಯಕ್ಷರೇ ಮೋದಿ ಅವರ ಆಡಳಿತವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ, ಇಂತಹ ಪ್ರಧಾನಿ ಪಡೆದ ನಾವು ಧನ್ಯರು’ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ‘ಮೋದಿ ಎಂದರೆ ದೇಶಾಭಿಮಾನ, ಮೋದಿ ಎಂದರೆ ಪ್ರಗತಿ, ಮೋದಿ ಎಂದರೆ ಪರೋಪಕಾರ, ಮೋದಿ ಎಂದರೆ ಅಭಯ, ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ನಮ್ಮ ಹೆಮ್ಮೆಯ ಭಾರತ ಸಾಧನೆಯ ನಾಗಾಲೋಟದಲ್ಲಿ ಸಾಗಿದೆ’ ಎಂದರು.
ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು. ಅನೇಕ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಗುನ್ನಾಳಕರ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ದೇಶದ ಅಭಿವೃದ್ಧಿಗಾಗಿ ಕೈಗೊಂಡಿರುವ ವಿವಿಧ ಜನಪರ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ರಾಘವೇಂದ್ರ ಕಾಪಸೆ ಮಾತನಾಡಿದರು.
ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡ ಸಂಜೀವ ಐಹೊಳೆ, ವಿವೇಕಾನಂದ ಡಬ್ಬಿ, ಉಮೇಶ ಕಾರಜೋಳ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಮಲಗೌಡ ಪಾಟೀಲ, ಈರಣ್ಣ ರಾವುರ, ಸಾಬು ಮಾಶಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net