ದೇಶದ ಅಭ್ಯುದಯ ಹಳ್ಳಿಗಳಲ್ಲಿ ಅಡಗಿದೆ

ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಬ್ರಿಡ್ಜ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು. ಎನ್.ವಿ. ಕುಲಕರ್ಣಿ, ಬಸಯ್ಯ ಹಿರೇಮಠ, ವಿ.ಬಿ. ಕುರುಡೆ, ಮುತ್ತು ಮುಂಡೇವಾಡಗಿ. ದಯಾನಂದ ಹಿರೇಮಠ ಇತರರಿದ್ದರು.
ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಬ್ರಿಡ್ಜ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು. ಎನ್.ವಿ. ಕುಲಕರ್ಣಿ, ಬಸಯ್ಯ ಹಿರೇಮಠ, ವಿ.ಬಿ. ಕುರುಡೆ, ಮುತ್ತು ಮುಂಡೇವಾಡಗಿ. ದಯಾನಂದ ಹಿರೇಮಠ ಇತರರಿದ್ದರು.
Published on
ಸಿಂದಗಿ: ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳ ಮಧ್ಯೆಯೂ ಮತಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಹಳ್ಳಿಗಳ ಅಭ್ಯುದಯವೇ ದೇಶದ ಅಭ್ಯುದಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಬಳಿಯ ಬ್ರಿಡ್ಜ್ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 1.81ಕೋಟಿ ವೆಚ್ಚದ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಬಹುತೇಕ ಹಳ್ಳಿಗಳ ರಸ್ತೆ, ಮೂಲ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಪ್ರಗತಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಭವಿಷ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ. ತಾವು ನೀಡಿದ ಪ್ರತಿ ಮತಕ್ಕೂ ಅಭಿವೃದ್ಧಿ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ಬಸಯ್ಯ ಹಿರೇಮಠ, ವಿ.ಬಿ. ಕುರುಡೆ, ಗುತ್ತಿಗೆದಾರ ಎನ್.ವಿ. ಕುಲಕರ್ಣಿ, ಮುತ್ತು ಮುಂಡೇವಾಡಗಿ. ದಯಾನಂದ ಹಿರೇಮಠ, ಕುಮಾರ ದೇಸಾಯಿ, ಸುರೇಶ ಬನಕನಳ್ಳಿ, ಷಣ್ಮುಖಯ್ಯ ಹಿರೇಮಠ, ಕುಮಾರ ದೇಸಾಯಿ, ಗೊಲ್ಲಾಳಪ್ಪ ನಾಯ್ಕೋಡಿ, ರಜಾಕ ಸೋಂಪೂರ, ಬಸಣ್ಣ ಯಳಮೇಲಿ, ದಯಾನಂದ ಹಿರೇಮಠ, ಜಾನಪ್ಪ ನಾಯ್ಕೋಡಿ, ಸಿದ್ದು ಬಿಸನಾಳ, ಶರಣಪ್ಪ ಜಮಾದಾರ, ಧರ್ಮರಾಜ ಬಡಾನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net