ನಾಡಿನ ರಕ್ಷಣೆಗೆ ಮಠಮಾನ್ಯಗಳ ಕೊಡುಗೆ ಅಪಾರ

 ಬಸವನಬಾಗೇವಾಡಿ ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಜಗದ್ಗುರು ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ. ಜ್ಞಾನ ದಾಸೋಹಿ ಶ್ರೀ ಸಂಗನಬಸವ ಮಹಾಸ್ವಾಮಿಗಳ 125ನೇ ಜಯಂತಿ ನೂತನ ಮಹಾದ್ವಾರವನ್ನು ವಿವಿಧ ಮಠಾಧೀಶರು ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು. ಬಂಥನಾಳದ ವೃಷಭಲಿಂಗ ಮಹಾಸ್ವಾಮೀಜಿ,  ಡಾ. ಗುರು ಸಂಗಮೇಶ ಹಿರೇಮಠ, ಪ್ರಭಾವತಿ ಹಿರೇಮಠ ಮತ್ತಿತರರಿದ್ದರು.
ಬಸವನಬಾಗೇವಾಡಿ ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಜಗದ್ಗುರು ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ. ಜ್ಞಾನ ದಾಸೋಹಿ ಶ್ರೀ ಸಂಗನಬಸವ ಮಹಾಸ್ವಾಮಿಗಳ 125ನೇ ಜಯಂತಿ ನೂತನ ಮಹಾದ್ವಾರವನ್ನು ವಿವಿಧ ಮಠಾಧೀಶರು ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು. ಬಂಥನಾಳದ ವೃಷಭಲಿಂಗ ಮಹಾಸ್ವಾಮೀಜಿ, ಡಾ. ಗುರು ಸಂಗಮೇಶ ಹಿರೇಮಠ, ಪ್ರಭಾವತಿ ಹಿರೇಮಠ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂಗಳೇಶ್ವರ ವಿರಕ್ತಮಠ ಜಗದ್ಗುರು ಡಾ. ಸಿದ್ಧಲಿಂಗ ಶ್ರೀ ಅಭಿಮತ
  • ನೂತನ ಮಹಾದ್ವಾರ ಲೋಕಾರ್ಪಣೆ
ಬಸವನಬಾಗೇವಾಡಿ: ನಾಡಿನ ರಕ್ಷಣೆಗಾಗಿ ಮತ್ತು ಭಕ್ತರ ಏಳಿಗೆಗಾಗಿ ಹಾಗೂ ಧಾರ್ಮಿಕ ಸಂಸ್ಕೃತಿ ಉಳಿಸಿ ಬೆಳೆಸಲು ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಇಂಗಳೇಶ್ವರ ವಿರಕ್ತಮಠ ಜಗದ್ಗುರು ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಸೋಮವಾರ ಜಗದ್ಗುರು ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ, ಶ್ರೀ ಸಂಗನಬಸವ ಸ್ವಾಮಿಗಳ 125ನೇ ಜಯಂತಿ, ನೂತನ ಮಹಾದ್ವಾರ ಲೋಕಾರ್ಪಣೆ, ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೇಷ್ಠ ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪುರಾತನ ಕಾಲದಿಂದಲೂ ಮಹಾದ್ವಾರಗಳು, ಗುಡಿ, ಗೋಪುರಗಳು ನಿರ್ಮಾಣ ಮಾಡುವುದು ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಬಿಂಬಿಸುವ ಕಾರ್ಯವಾಗಿದೆ. ಇಂತಹ ಕಾರ್ಯದಿಂದ ಭಕ್ತರಿಗೆ ಅಜ್ಞಾನದಿಂದ ವಿಜ್ಞಾನದ ಕಡೆ ಕೊಂಡೊಯ್ಯುವುದು ಮತ್ತು ಜನರಲ್ಲಿ ಧರ್ಮದ ಸಂಸ್ಕೃತಿ ಜಾಗೃತಿ ಮೂಡಿಸುವ ಕೆಲಸವಾಗಿದೆ ಎಂದು ಹೇಳಿದರು.
ಶ್ರೀಮಠದ ಗುರು ಸಂಗನಬಸವ ಶ್ರೀ ಮಾತನಾಡಿ, ಬೇರೆ ಬೇರೆ ದೇಶಗಳಲ್ಲಿ ಹೆಣ್ಣು ಮಕ್ಕಳನ್ನು ಭೋಗದ ವಸ್ತುಗಳಂತೆ ನೋಡುತ್ತಾರೆ. ಆದರೆ ಭಾರತ ದೇಶದಲ್ಲಿ ಹೆಣ್ಣಿಗೆ ಪೂಜಾ ಸ್ಥಾನ ನೀಡುತ್ತೇವೆ. ಅವರನ್ನು ತಾಯಿ, ತಂಗಿ, ಅಕ್ಕನಾಗಿ ಬಾಂಧವ್ಯದೊAದಿಗೆ ಅವರೊಂದಿಗೆ ಪ್ರೀತಿ ಗೌರವದೊಂದಿಗೆ ಕಾಣುತ್ತೇವೆ ಎಂದರು.
ವಿಶ್ವಕ್ಕೆ ಆಪತ್ತು ಬಂದಿದೆ. ವಿಶ್ವದಲ್ಲಿ ಶಾಂತಿ, ನೆಮ್ಮದಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಸಂಕಲ್ಪ ಮಾಡಿ ಸರ್ವರನ್ನು ಸಮಾನಾಗಿ ಕಾಣುವ ವಿಶ್ವ ಶಾಂತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಪ್ರಾರ್ಥಿಸೋಣ ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ಬಂಥನಾಳದ ವೃಷಭಲಿಂಗ ಮಹಾಸ್ವಾಮೀಜಿ ವಹಿಸಿದ್ದರು. ತೊರವಿಮಠದ ಸಿದ್ಧಲಿಂಗ ಶ್ರೀಗಳು, ಹೂವಿನಹಿಪ್ಪರ ಪತ್ರಿವನ ಮಠದ ದ್ರಾಕ್ಷಾಯಣಿ ಅಮ್ಮನವರು, ನಿವೃತ್ತ ಪ್ರಾಂಶುಪಾಲ ಡಾ. ಗುರು ಸಂಗಮೇಶ ಹಿರೇಮಠ, ನಿವೃತ್ತ ನ್ಯಾಯಾಧೀಶೆ ಪ್ರಭಾವತಿ ಹಿರೇಮಠ ಮತ್ತಿತರರಿದ್ದರು.
ಯಮುನಾ ಮಠ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಜಾಲಗೇರಿ ಸ್ವಾಗತಿಸಿದರು. ಗಿರಿಜಾ ಪಾಟೀಲ, ಶರಣಬಸು ಹಳಮನಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net