ಸಮಾಜ ಒಗ್ಗೂಡಿಸುವ ಶಕ್ತಿ ಸಂವಿಧಾನಕ್ಕಿದೆ, ಡಾ.ಎಚ್.ಟಿ. ಪೋತೆ ವಿಶೇಷ ಉಪನ್ಯಾಸ

ಡಾ.ಎಚ್.ಟಿ. ಪೋತೆ
ಡಾ.ಎಚ್.ಟಿ. ಪೋತೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಮಟ್ಟದ ಬೃಹತ್ ಪುಸ್ತಕ ಮೇಳ
  • ಮೇ ಸಾಹಿತ್ಯ ಬಳಗದ ಸಹಯೋಗ
  • ದಲಿತ-ಪ್ರಗತಿಪರ ಸಂಘಟನೆಗಳ ಆಶ್ರಯ
ವಿಜಯಪುರ: ಮಹಾತ್ಮ ಜ್ಯೋತಿಬಾ ಫುಲೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಗಾಗಿ ಹೋರಾಡಿದರು. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಸರ್ವರಿಗೂ ಸಮಾನತೆ ನೀಡಿದೆಯಲ್ಲದೇ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ಕಲಬುರಗಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಚ್.ಟಿ. ಪೋತೆ ಹೇಳಿದರು.
ನಗರದ ದರಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ‘ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ’ದ ಎರಡನೇ ದಿನವಾದ ಶನಿವಾರದಂದು ಅವರು ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಹನ್ನೆರಡನೇ ಶತಮಾನದಲ್ಲಿ ಅಪ್ಪನು ಮಾದರ ಚೆನ್ನಯ್ಯ, ಬಪ್ಪನು ಡೋಹರ ಕಕ್ಕಯ್ಯ ಎನ್ನುವ ಮೂಲಕ 900 ವರ್ಷಗಳ ಹಿಂದೆ ಬಸವಣ್ಣ, 2000 ವರ್ಷಗಳ ಹಿಂದೆ ಬುದ್ಧ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರು. ಅದನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೊಳಿಸಿದರು. ಇಂತಹ ಬುದ್ದ, ಬಸವ, ಕಬೀರ, ಫುಲೆ ಮತ್ತು ಅಂಬೇಡ್ಕರ್ ಜಗತ್ತಿಗೆ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಜಾತಿಯ ಸಮಸ್ಯೆಗಳು ಬಗೆಹರಿಸುವುದು ಹೇಗೆ ಮತ್ತು ನಮ್ಮ ಹುಟ್ಟಿನ ಮೂಲ ಸಮಾಜದಲ್ಲಿ ಎಲ್ಲರಿಗೂ ಕಾಡುವ ಎರಡು ಪ್ರಶ್ನೆಗಳಾಗಿವೆ ನಾವು ಪಡೆಯುವ ಶಿಕ್ಷಣ ನಮ್ಮ ಮೌಢ್ಯ ಕಳೆಯುತ್ತದೆ ಎಂಬುದು ತಪ್ಪು. ಇವತ್ತಿನ ಶಿಕ್ಷಣ ಎತ್ತ ಸಾಗಿದೆ ಎಂದು ನಾವು ಚಿಂತಿಸಬೇಕಿದೆ. ಮಕ್ಕಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕಿದೆ ಎಂದರು.
ಮುಖಂಡ ಸುರೇಶ ಘೊಣಸಗಿ, ಡಿ.ಎಲ್. ಚವಾಣ್ ಮಾತನಾಡಿದರು.
ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಚ್. ನಾಡಗಿರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿದಾನಂದ ಕಾಂಬಳೆ, ಸುರೇಖಾ ರಜಪೂತ, ಸಿದ್ದಪ್ಪ ಹೊಸಮನಿ, ಸತ್ಯಪ್ಪ ಚಲವಾದಿ, ಕೆ.ಎಂ. ಕೂಡಲಗಿ, ಸಿದ್ದನಗೌಡ ಪಾಟೀಲ, ಬಸವರಾಜ ತಾಳಿಕೋಟಿ, ಶಬ್ಬಿರ ಕಾಗಜಕೋಟಿ, ಸಾಹೇಬಗೌಡ ಪಾಟೀಲ, ಚಂದ್ರಕಾಂತ ಸಿಂಗೆ, ರವಿ ಕಿತ್ತೂರ, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ ವೈ.ಎಸ್. ಗುಣಕಿ, ಚಂದ್ರಶೇಖರ ಹೊಸಮನಿ, ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಶಿವು ಕಟ್ಟಿಮನಿ, ಸೋಮು ರಣದೇವಿ, ರಾಜೇಶ ಚಲವಾದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net