ಸಾಮಾನ್ಯರಿಗೆ ಸಿದ್ಧರಾಮರ ವ್ಯಕ್ತಿತ್ವ ತಿಳಿಯುವುದಿಲ್ಲ

ಡಾ. ಎಸ್.ಕೆ. ಕೊಪ್ಪ
ಡಾ. ಎಸ್.ಕೆ. ಕೊಪ್ಪ
Published on
ಸಾಮಾನ್ಯ ಜನರಿಗೆ ಸಿದ್ಧರಾಮ ಶಿವಯೋಗಿಗಳ ಸಂಕೀರ್ಣ ವ್ಯಕ್ತಿತ್ವ ತಿಳಿಯುವುದಿಲ್ಲ. ಅವರು ರಚಿಸಿದ ವಚನಗಳು ೮೫೧ ಎಂದು ೧೯೩೨ರಲ್ಲಿ ಫ.ಗು.ಹಳಕಟ್ಟಿಯವರು ಹೇಳಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಎಸ್.ಕೆ.ಕೊಪ್ಪ ಹೇಳಿದರು.
ನಗರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶರಣರ ಅನುಭಾವ ಮರುಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ಧರಾಮರ ಬದುಕು, ಕೆರೆ ಕಟ್ಟಿಸಿದ್ದು, ಅಲ್ಲಮರೊಂದಿಗೆ ಸಂವಾದ, ಕಲ್ಯಾಣಕ್ಕೆ ಹೋಗಿದ್ದು, ಲಿಂಗದೀಕ್ಷೆ ಪಡೆದದ್ದು ಇವೆಲ್ಲವುಗಳ ಸಾಧನೆ ಮಾಡಿ ವಚನಗಳನ್ನು ರಚಿಸಿದ್ದು, ಸಿದ್ಧಿ ಪಡೆದು ಶರಣರ ಅನುಭಾವದ ನೆಲೆಯಲ್ಲಿ ಅವರ ಚರಿತ್ರೆಯನ್ನು ನೈಜತೆಯ ಹಿನ್ನೆಲೆಯಲ್ಲಿ ಬಿಚ್ಚಿಟ್ಟು ಅಷ್ಟಯೋಗವನ್ನು ಮಾಡಿದ ಅಪರೂಪದ ಸಾಧಕರಾಗಿದ್ದರು ಎಂದು ತಿಳಿಸಿದರು.
ಸಾಹಿತಿ ಬಿ.ಆರ್.ಬನಸೋಡೆ ವಚನಗಾಯನ ಮಾಡಿದರು. ಡಾ. ಎಂ.ಎಸ್. ಮದಭಾವಿ ಸ್ವಾಗತಿಸಿ, ಪರಿಚಯಿಸಿದರು. ಸುಭಾಸ ಕನ್ನೂರ ನಿರೂಪಿಸಿದರು. ವಿ.ಡಿ. ಐಹೊಳ್ಳಿ ವಂದಿಸಿದರು.
ಎಸ್.ವೈ. ಗದಗ, ಆರ್.ಕೆ. ಕುಲಕರ್ಣಿ, ಎನ್.ಆರ್. ಕುಲಕರ್ಣಿ, ಸಂಗಮೇಶ ಬಾದಾಮಿ, ಎಂ.ಎನ್. ಚಾಂದಕವಟೆ, ಜೆ.ಎಸ್. ಗಲಗಲಿ, ಆರ್.ಜಿ. ಬ್ಯಾಕೋಡ, ಎಂ.ಎಸ್. ಮಾಗಣಗೇರಿ, ಸುಭಾಷ ಯಾದವಾಡ, ವಿ.ಎಂ. ಬಾಗಾಯತ, ‌ಲಕ್ಷ್ಮೀ ಮೊರೆ, ಪ್ರಭಾವತಿ ದೇಸಾಯಿ, ಎಸ್.ಬಿ. ದೊಡಮನಿ, ಜಿ.ಬಿ. ಸಾಲಕ್ಕಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net