ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಈ ಗ್ಯಾಂಗ್ ಕಾಣಿಸಿಕೊಂಡಿದೆ. ಬರೀ ಚಡ್ಡಿ, ಕಚ್ಚೆ ಧರಿಸಿ, ಮುಖಕ್ಕೆ ಮುಖವಾಡ ಹಾಕಿಕೊಂಡು ಬರುವ ಈ ಗ್ಯಾಂಗ್‌ನ ಕೆಲವರು ಗ್ರಾಮದಲ್ಲಿ ರಾತ್ರಿ ಕಳ್ಳತನಕ್ಕೆ ಯತ್ನಿಸಿದ ಸಿಸಿಟಿವಿ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ರಾತ್ರಿ ಓಣಿಗಳಲ್ಲಿ ಅಡ್ಡಾಡುವ ದೃಶ್ಯ, ಮನೆಗಳ ಗೇಟ್ ತೆಗೆದು ಒಳಬಂದ ದೃಶ್ಯಗಳು ಜನರ ನಿದ್ದೆಗೆಡಿಸಿವೆ.