ಪ್ಲಾಸ್ಟಿಕ್ ಮುಕ್ತ ಅಡುಗೆ ಮನೆ ರೂಪಿಸಿ, ತೇಜಸ್ವಿನಿ ಅನಂತಕುಮಾರ ಅಮೋಘ ಭಾಷಣ

ವಿಜಯಪುರ ನಗರದ ಶಿವ ಚಿದಂಬರ ದೇವಾಲಯದಲ್ಲಿ ಶ್ರೀ ಶಿವಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥದ ಪಠಣದ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅದಮ್ಯ ಚೈತನ್ಯ ಸಂಸ್ಥೆಯ ಪ್ರಮುಖರಾದ ತೇಜಸ್ವಿನಿ ಅನಂತಕುಮಾರ ಮಾತನಾಡಿದರು.
ವಿಜಯಪುರ ನಗರದ ಶಿವ ಚಿದಂಬರ ದೇವಾಲಯದಲ್ಲಿ ಶ್ರೀ ಶಿವಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥದ ಪಠಣದ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅದಮ್ಯ ಚೈತನ್ಯ ಸಂಸ್ಥೆಯ ಪ್ರಮುಖರಾದ ತೇಜಸ್ವಿನಿ ಅನಂತಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿದಂಬರ ದೇವಸ್ಥಾನದಲ್ಲಿ ಮಹಿಳಾ ಗೋಷ್ಠಿ
  • ಸುವರ್ಣ ಮಹೋತ್ಸವ ಅಂಗವಾಗಿ ಕಾರ್ಯಕ್ರಮ
  • ಅಪ್ರಕಾಶಿತ ಲೀಲಾಗ್ರಂಥದ ಪಠಣ
ವಿಜಯಪುರ: ‘ಪ್ಲಾಸ್ಟಿಕ್ ಮುಕ್ತ ಅಡುಗೆ ಮನೆ ರೂಪಿಸುವುದು ಮಹಿಳೆಯರ ಸಂಕಲ್ಪವಾಗಬೇಕು’ ಎಂದು ಅದಮ್ಯ ಚೈತನ್ಯ ಸಂಸ್ಥೆಯ ಪ್ರಮುಖರಾದ ತೇಜಸ್ವಿನಿ ಅನಂತಕುಮಾರ ಹೇಳಿದರು.
ಇಲ್ಲಿನ ಶಿವ ಚಿದಂಬರ ದೇವಾಲಯದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿ ನೇತೃತ್ವದಲ್ಲಿ ಶ್ರೀ ಶಿವಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥದ ಪಠಣದ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪ್ಲಾಸ್ಟಿಕ್ ನಿಸರ್ಗಕ್ಕೆ ಅತ್ಯಂತ ಅಪಾಯಕಾರಿ, ಪ್ಲಾಸ್ಟಿಕ್ ತನ್ನ ವಿಷಕಾರಿ ಅಂಶವನ್ನು ಹೊರ ಸೂಸುತ್ತಲೇ ಇರುತ್ತದೆ, ಪ್ಲಾಸ್ಟಿಕ್ ಒಂದು ಅಪಾಯಕಾರಿ ಅಂಶ, ಹೀಗಾಗಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಸಂಕಲ್ಪವಾಗಬೇಕು, ಈ ಕಾರ್ಯ ಯಶಸ್ವಿಯಾಗಲು ಮೊದಲು ನಮ್ಮ ಅಡುಗೆ ಮನೆ ಪ್ಲಾಸ್ಟಿಕ್ ಮುಕ್ತವಾಗಬೇಕು, ಈ ಕಾರ್ಯ ಸಾಧ್ಯವಾಗಬೇಕಾಗಿರುವುದು ಮಹಿಳೆಯರಿಂದ’ ಎಂದರು.
‘ಅಡುಗೆ ಪರಿಕರ, ಸಂಗ್ರಹ ಹೀಗೆ ಎಲ್ಲದಕ್ಕೂ ಪ್ಲಾಸ್ಟಿಕ್ ವಸ್ತುಗಳ ಮೇಲೆ ಅವಲಂಬನೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು, ಇದರಿಂದ ಹಂತ ಹಂತವಾಗಿ ಅಡುಗೆ ಮನೆ, ನಂತರ ಮನೆ, ನಂತರ ಸಮಾಜ ಪ್ಲಾಸ್ಟಿಕ್ ಮುಕ್ತವಾಗಿರಲು ಸಾಧ್ಯ’ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ‘ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಮಹತ್ತರ ಹೊಣೆಗಾರಿಕೆ ತಾಯಂದಿರ ಮೇಲಿದೆ, ಹೀಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ನಮ್ಮ ಪವಿತ್ರ ಹಿಂದೂತ್ವದ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಕಾರ್ಯ ಮಾಡಬೇಕು’ ಎಂದರು.
ಸಿಂದಗಿಯ ಭೀಮಾಶಂಕರ ಮಠದ ಸದಾಶಿವ ಅಪ್ಪಯ್ಯ ಮಹಾಸ್ವಾಮೀಜಿ, ವಲ್ಲಭ ಸ್ವಾಮೀಜಿ, ಸದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿಕ್ಷಣ ಹಾಗೂ ಅಧ್ಯಾತ್ಮಿಕತೆ ಎಂಬ ವಿಷಯಗಳ ಕುರಿತು ಡಾ.ರಾಘವೇಂದ್ರ ಕುಲಕರ್ಣಿ ಉಪನ್ಯಾಸ ಮಂಡಿಸಿದರು. ಬಾಗಲಕೋಟೆ ತೋಟಗಾರಿಕೆ ವಿವಿ ಕುಲಸಚಿವ ಬಾಲಾಜಿ ಕುಲಕರ್ಣಿ ಉಪನ್ಯಾಸ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ, ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ, ಉಪಾಧ್ಯಕ್ಷ ಅಂಬಾದಾಸ ಜೋಶಿ, ಕಾರ್ಯದರ್ಶಿ ವೇದಮೂರ್ತಿ ವೆಂಕಟೇಶ ಭಟ್ ಅಗ್ನಿಹೋತ್ರಿ, ವೆಂಕಟೇಶ ಜೋಶಿ, ವಿ.ಸಿ. ಕುಲಕರ್ಣಿ, ಸಿ.ಕೆ. ಕುಲಕರ್ಣಿ, ವಿಜಯ ಜೋಶಿ, ವೆಂಕಟೇಶ ಜೋಶಿ, ಮುಕುಂದ ಹಂಗರಗಿ, ಚಿದಂಬರ ಜೋಶಿ ರೊಳ್ಳಿ, ಸುಧೀಂದ್ರ ಕುಲಕರ್ಣಿ, ವೆಂಕಟೇಶ ಜೋಶಿ ಹಡ್ಲಿಗೇರಿ, ಉಪೇಂದ್ರ ದೇಸಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net