ಗುಮ್ಮಟ ನಗರಿಯಲ್ಲಿ ಗಮನ ಸೆಳೆದ ಶಿಕ್ಷಕ ದಂಪತಿ ಜಾಥಾ, ಜ್ಯೋತಿಬಾ ಫುಲೆ ಭಾವಚಿತ್ರ ಪ್ರದರ್ಶನ
ವಿಜಯಪುರ ನಗರದಲ್ಲಿ ‘ಬಿಜಾಪುರ, ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ’ದಂಗವಾಗಿ ನಡೆದ ಶಿಕ್ಷಕ ದಂಪತಿ ಜಾಥಾ ಗಮನ ಸೆಳೆಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜ್ಯಮಟ್ಟದ ಬೃಹತ್ ಪುಸ್ತಕ ಮೇಳ
ಡಾ.ಅಂಬೇಡ್ಕರ್ ಜಯಂತಿ ಹಿನ್ನೆಲೆ
ಮೇ ಸಾಹಿತ್ಯ ಬಳಗದ ಸಹಯೋಗ
ದಲಿತ-ಪ್ರಗತಿಪರ ಸಂಘಟನೆಗಳ ಸಾಥ್
ವಿಜಯಪುರ: ನಗರದ ದರಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ‘ಬಿಜಾಪುರ, ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ’ದ ಎರಡನೇ ದಿನವಾದ ಶನಿವಾರದಂದು ಶಿಕ್ಷಕ ದಂಪತಿ ಮಹಾತ್ಮ ಜ್ಯೋತಿಬಾ ಫುಲೆ ಭಾವಚಿತ್ರದೊಂದಿಗೆ ಜಾಥಾ ನಡೆಸಿದರು.
ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಚ್. ನಾಡಗಿರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ, ಹೊನಮಲ್ಲಗೌಡ ಸಾರವಾಡ, ಎಸ್.ಎಂ. ಡೋಣಿ, ಆಶಾ ಕಟ್ಟಿಮನಿ, ನೀಲಾಂಬಿಕಾ ಬಿರಾದಾರ, ರಶ್ಮಿ ಗುಣಕಿ, ವಿಜಯಶ್ರೀ ಬಿಜಾಪುರ, ಹಣಮಂತ ಮಮದಾಪುರ, ಸಲೀಂ ಕಲಾದಗಿ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಮತ್ತು ದೇಶದ ಮೊದಲ ಶಿಕ್ಷಕ ದಂಪತಿ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿಗೆ ಜಯಘೋಷ ಮೊಳಗಿದವು.