ಅನಗತ್ಯವಾಗಿ ಕುಡಿಯುವ ನೀರು ಪೋಲಾಗದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದು ಮೂರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಒಂದು ವೇಳೆ ಕುಡಿಯುವ ನೀರು ಪೋಲು ಕಂಡು ಬಂದಲ್ಲಿ 2 ಸಾವಿರ ರೂ. ಹಾಗೂ ಅನಧಿಕೃತ ನಳ ಸಂಪರ್ಕ ಪಡೆದುಕೊಂಡವರಿಗೆ 5 ಸಾವಿರ ರೂ. ದಂಡ ವಿಧಿಸಬೇಕೆಂಬ ಮಹಾನಗರ ಪಾಲಿಕೆಯ ಠರಾವಿನ ಷರತ್ತುಗಳನ್ವಯ ದಂಡ ವಿಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.