ಪ್ರೊ. ಭಗವಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಸರ್ಕಾರಕ್ಕೆ ಸ್ವರಾಜ್ಯ ಸೇನಾ ಆಗ್ರಹ

ವಿಜಯಪುರ ನಗರದಲ್ಲಿ ಸ್ವರಾಜ್ಯ ಸೇನಾ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕಿರಣ ಕಾಳೆ, ಆನಂದ ಚೌಧರಿ, ಪವನ ನಲಗೆ ಇತರರಿದ್ದಾರೆ.
ವಿಜಯಪುರ ನಗರದಲ್ಲಿ ಸ್ವರಾಜ್ಯ ಸೇನಾ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕಿರಣ ಕಾಳೆ, ಆನಂದ ಚೌಧರಿ, ಪವನ ನಲಗೆ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಭು ಶ್ರೀರಾಮಚಂದ್ರನ ಕುರಿತು ಅವಹೇಳನ
  • ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
  • ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ
ವಿಜಯಪುರ: ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ ಪ್ರೊ.ಕೆ.ಎಸ್. ಭಗವಾನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಸ್ವರಾಜ್ಯ ಸೇನಾ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಕಿರಣ ಕಾಳೆ ಮಾತನಾಡಿ, ಇಡೀ ವಿಶ್ವಕ್ಕೆ ಆದರ್ಶವಾಗಿರುವ ಶ್ರೀರಾಮನ ಬಗ್ಗೆ ಮತ್ತು ಹಿಂದೂ ಸಂಸ್ಕೃತಿ ಬಗ್ಗೆ ಪ್ರೊ.ಕೆ.ಎಸ್. ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ್ದು ಖಂಡನೀಯ. ಚುನಾವಣೆ ಸಮಯದಲ್ಲಿ ನನ್ನ ಹೆಸರಿನಲ್ಲೂ ರಾಮ ಇದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರೆ, ನಾನು ಹಿಂದೂ ಇದ್ದೇನೆ, ರಾಜಕೀಯಕ್ಕಾಗಿ ನನ್ನ ಧರ್ಮ ಬಿಡಲಾಗಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ, ನಿಮ್ಮ ಹಿಂದೂ ಧರ್ಮದ ಬಗ್ಗೆ ಅವಹೇಳನ ನಡೆದರೂ ತಾವು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು.
ಕೂಡಲೇ ಸರ್ಕಾರ ಇಂತಹ ಹಿಂದೂ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಸಮಸ್ತ ಹಿಂದೂ ಬಾಂಧವರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪದಾಧಿಕಾರಿಗಳಾದ ಆನಂದ ಚೌಧರಿ, ಪವನ ನಲಗೆ, ಗಣೇಶ ಗರುಡಕರ, ಸ್ವರೂಪ ಸಪ್ತಾಳೆ, ಆಕಾಶ ಗೋತ್ರಾಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net