ಪ್ರತಿಭಾ ಪುರಸ್ಕಾರ ಸಾಧನೆಗೆ ಸೂತಿ

ವಿಜಯಪುರದ ಕಿತ್ತೂರ ರಾಣಿ ಚನ್ನಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಸವರಾಜ ಯಲಿಗಾರ, ಸುರೇಶ ಬಿರಾದಾರ, ಯೋಗೇಶ್ವರಿ ಮಾತಾಜಿ ಮತ್ತಿತರರಿದ್ದಾರೆ.
ವಿಜಯಪುರದ ಕಿತ್ತೂರ ರಾಣಿ ಚನ್ನಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಸವರಾಜ ಯಲಿಗಾರ, ಸುರೇಶ ಬಿರಾದಾರ, ಯೋಗೇಶ್ವರಿ ಮಾತಾಜಿ ಮತ್ತಿತರರಿದ್ದಾರೆ.
Published on
ವಿಜಯಪುರ: ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳಿಂದ ಸಾಧನೆ ಮಾಡುವ ನಿಟ್ಟಿನಲ್ಲಿ ಸೂರ್ತಿ ತುಂಬುತ್ತವೆ ಎಂದು ಕಲಬುರಗಿ ಲೋಕಾಯುಕ್ತ ಠಾಣೆ ಡಿವೈಎಸ್‌ಪಿ ಡಾ. ಬಸವರಾಜ ಯಲಿಗಾರ ಹೇಳಿದರು.
ಕರ್ನಾಟಕ ರಾಜ್ಯ ಕಿತ್ತೂರ ರಾಣಿ ಚನ್ನಮ್ಮ ಉತ್ಸವ ಪಂಚಮಸಾಲಿ ಸಂಘ ಮತ್ತು ಸ್ಥಳೀಯ ಕಿತ್ತೂರ ರಾಣಿ ಚನ್ನಮ್ಮ ಸಂಸ್ಥೆಗಳ ಸಹಯೋಗದಲ್ಲಿ ನಗರದ ಜ್ಞಾನಯೋಗಾಶ್ರಮ ರಸ್ತೆಯ ಐಶ್ವರ್ಯ ನಗರದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾಧನೆಗೈದವರಿಗೆ ಸನ್ಮಾನಗಳು ನಡೆಯಬೇಕು. ಅಲ್ಲದೇ, ಸಾಧನೆಯನ್ನು ಮೆಚ್ಚಿ ಚಪ್ಪಾಳೆ ತಟ್ಟುವ ನಾಲ್ಕು ಕೈಗಳು ಇರಬೇಕು. ಅಂದಾಗ ಮಾತ್ರ ಆ ಸಾಧನೆಗೆ ಬೆಲೆ ಇರಲಿದ್ದು, ಸಾಧಕನು ಮತ್ತಷ್ಟು ಸಾಧನೆ ಮಾಡಲು ಹುಮ್ಮಸ್ಸು ಬರಲಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಶ್ಲಾಘನೀಯ. ವಿದ್ಯಾರ್ಥಿಗಳು ಸಾಧನೆಗೈಯುವ ಮೂಲಕ ತಂದೆ-ತಾಯಿ, ಗುರುಗಳಿಗೆ, ಶಿಕ್ಷಕರಿಗೆ ಮತ್ತು ಸಮಾಜಕ್ಕೆ ಹೆಸರು ತರಬೇಕು ಎಂದರು.
ಸAಘದ ಜಿಲ್ಲಾಧ್ಯಕ್ಷ ಡಾ. ಸುರೇಶ ಬಿರಾದಾರ ಮಾತನಾಡಿ, ಈ ಪ್ರತಿಭಾ ಪುರಸ್ಕಾರಕ್ಕೆ ಜಿ¯್ಲೆಯ ಎಲ್ಲ ವಿದ್ಯಾರ್ಥಿಗಳು ಪಾಲಕರು ಸ್ಪಂದಿಸಿz್ದÁರೆ. ಸುಮಾರು 400 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗಿದ್ದು, ವಿದ್ಯಾರ್ಥಿಗಳ ಸಾಧನೆ ಗುರುತಿಸಲು ಸಮಾಜದ ಹಿತದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬುರುಣಾಪುರ ಆಶ್ರಮದ ಯೋಗೇಶ್ವರಿ ಮಾತಾಜಿ ಮತ್ತು ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾಜದ ಹಿರಿಯರಾದ ವಿ.ಎನ್. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಽಕ ಅಂಕ ಪಡೆದ ಸುಮಾರು 400ಕ್ಕೂ ಅಽಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಡಿಎ ಆಯುಕ್ತ ರಾಜಶೇಖರ ಡಂಬಳ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಜಿ.ಪಂ. ಮುಖ್ಯ ಲೆಕ್ಕಾಽಕಾರಿ ರಾಮಣ್ಣ ಅಥಣಿ, ಸಾಹಿತಿಗಳಾದ ಅಶೋಕ ಹಂಚಲಿ, ಬಿ.ಎಸ್. ಬಿರಾದಾರ, ಶರಣು ಆಲೂರ, ವೀರಭದ್ರಪ್ಪ ಹಲಕವಟಗಿ, ಹೊನಮಲ್ಲ ಸಾರವಾಡ, ಸುರೇಶ ಶೇಡಶ್ಯಾಳ, ಉಮೇಶ ಕೊಳಕೂರ, ಭೀಮಾಶಂಕರ ಹದನೂರ, ಶೀಲಾ ಬಿರಾದಾರ, ಗೀತಾ ಅಂಗಡಿ, ರಾಜುಗೌಡ ಕಳಸಗೊಂಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net