ಸತತ ಅಧ್ಯಯನದಿಂದ ಸಾಧನೆ ಸಾಧ್ಯ

 ನಿಡಗುಂದಿಯ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಅಧಿಕಾರಿಗಳ ನಡೆ ವಸತಿ ನಿಲಯದ ವಾಸ್ತವ್ಯದ ಕಡೆ ಎಂಬ ಕಾರ್ಯಕ್ರಮವನ್ನು ತಾಪಂ ಇಒ ವೆಂಕಟೇಶ್ ವಂದಾಲ ಉದ್ಘಾಟಿಸಿದರು. ನೋಡಲ ಅಧಿಕಾರಿ ಉಪ ನಿರ್ದೇಶಕ ಮಹೇಶ ಪೋತದಾರ, ಬಸವರಾಜ ಹಂಚಲಿ, ಸಾಹಿತಿ ಮನು ಪತ್ತಾರ, ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜು ಹಿರೇಮನಿ ಇತರರಿದ್ದಾರೆ.

Published on
ನಿಡಗುಂದಿ: ಜಗತ್ತಿನಲ್ಲಿ ಶ್ರೇಷ್ಠ. ಪುಸ್ತಕಗಳು ವಿದ್ಯಾರ್ಥಿಗಳನ್ನು ಎತ್ತರ ಮಟ್ಟಕ್ಕೆ ಕರೆದೊಯ್ಯುವ ಶಕ್ತಿ ಹೊಂದಿವೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ವೆಂಕಟೇಶ್ ವಂದಾಲ ಹೇಳಿದರು.
ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅಧಿಕಾರಿಗಳ ನಡೆ ವಸತಿ ನಿಲಯದ ವಾಸ್ತವ್ಯದ ಕಡೆ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ ಎಂ. ವಿಶ್ವೇಶ್ವರಯ್ಯ, ಅಬ್ದುಲï ಕಲಾಂ, ಅಂಬೇಡ್ಕರ್ ಅವರ ಹಾದಿಯಲ್ಲಿರುವವರನ್ನು ಪ್ರೇರಣೆಯಾಗಿಟ್ಟುಕೊಂಡು ಸತತ ಅಧ್ಯಯನ ಮಾಡಿದಾಗ ಮಾತ್ರ ಸಾಧನೆ ಸಾಧ್ಯವಾಗುವುದು. ವಿದ್ಯಾರ್ಥಿಗಳು ನಿಲಯದಲ್ಲಿನ ಮೂಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ನೋಡಲ ಅಧಿಕಾರಿ ಉಪ ನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಭ್ಯಾಸದಲ್ಲಿ ತೊಡಗಿಕೊಂಡು ಸುಂದರ ಭವಿಷ್ಯ ನಿರ್ಮಿಸಿಕೊಳ್ಳಬೇಕೆಂದರಲ್ಲದೆ, ನಿಲಯದಲ್ಲಿ ಅಽಕಾರಿಗಳು ವಾಸ್ತವ್ಯ ಮಾಡಿ ವಿದ್ಯಾರ್ಥಿಗಳೊಂದಿಗೆ ಬೆರೆತು, ವಿದ್ಯಾರ್ಥಿಗಳಿಗೆ ಭರವಸೆ ತುಂಬುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಬಸವರಾಜ ಹಂಚಲಿ, ಸಾಹಿತಿ ಮನು ಪತ್ತಾರ, ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜು ಹಿರೇಮನಿ ಮಾತನಾಡಿದರು.
ಶಿಕ್ಷಕ ಮುತ್ತು ಹೆಬ್ಬಾಳ, ಸಲೀಂ ದಡೇದ್, ಜಯಲಕ್ಷ್ಮೀ ಸಗರನಾಳ, ಎಸ್.ಎಸ್. ಹೊಳಿ, ಬಸವರಾಜ ಚಕ್ರವರ್ತಿ, ಬಸವರಾಜ ಬಡಿಗೇರ, ಮೋಹನ್ ಜಾದವ್, ಸೈಪಾನ್ ಕೊರ್ತಿ, ರಸೂಲï ಪಿಂಜಾರ ಹುಸೇನಪ್ಪ, ಭೈರಪ್ಪ ಕುಂಬಾರ, ರಾಜೇಶ್ವರಿ ಗೋಗಿ, ಶಾಂತಾ ಕಸ್ತೂರಿ, ಅಮಿತ್ ಸಗರನಾಳ ಇತರರಿದ್ದರು.
ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧಿಕ್ಷಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ನಡವಿನಮನಿ ನಿರೂಪಿಸಿದರು. ವಿರೇಶ ಗೂಡ್ಲಮನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net