ವಿದ್ಯಾರ್ಥಿಗಳು ದುಶ್ಚಟಗಳಿಗಳಿಂದ ದೂರವಿರಿ

ವಿಜಯಪುರದ ಎಸ್.ಸಿ. ಉಪ್ಪಿನ ಪದವಿ ಮಹಾವಿದ್ಯಾಲಯದಲ್ಲಿ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು. ಸುನಿತಾ ಕಟ್ಟಿಮನಿ, ಬಸವರಾಜ ತಿಪ್ಪಾರೆಡ್ಡಿ, ಎಂ.ಎA. ಸಜ್ಜನ ಮತ್ತಿತರರಿದ್ದಾರೆ.
ವಿಜಯಪುರದ ಎಸ್.ಸಿ. ಉಪ್ಪಿನ ಪದವಿ ಮಹಾವಿದ್ಯಾಲಯದಲ್ಲಿ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು. ಸುನಿತಾ ಕಟ್ಟಿಮನಿ, ಬಸವರಾಜ ತಿಪ್ಪಾರೆಡ್ಡಿ, ಎಂ.ಎA. ಸಜ್ಜನ ಮತ್ತಿತರರಿದ್ದಾರೆ.
Published on
ವಿಜಯಪುರ: ಯುವ ಜನತೆ ಮನರಂಜನೆ ಹಾಗೂ ಮೋಜು ಮಸ್ತಿಗಾಗಿ ದುಶ್ಚಟಗಳಿಗೆ ಅಂಟಿಕೊAಡಲ್ಲಿ ಅದರಿಂದ ಹೊರ ಬರುವುದು ಕಷ್ಟ ಸಾಧ್ಯ. ವಿದ್ಯಾರ್ಥಿಗಳು ಮಾದಕ ಪದಾರ್ಥಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ ತಿಪ್ಪಾರೆಡ್ಡಿ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಎಸ್.ಸಿ. ಉಪ್ಪಿನ ಪದವಿ ಮಹಾವಿದ್ಯಾಲಯದಲ್ಲಿ ಎಪಿಎಂಸಿ ಪೊಲೀಸ್ ಠಾಣೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ಕುರಿತ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಅವರು ಮಾತನಾಡಿದರು.
ಪಿಎಸ್‌ಐ ನಾಗರತ್ನ ಉಪ್ಪಲದಿನ್ನಿ ಮಾತನಾಡಿ, ದೇವರು ನಮಗೆ ಸುಂದರ ಜೀವನ ನೀಡಿದ್ದಾನೆ. ಅದನ್ನು ಹಾಳು ಮಾಡಿಕೊಳ್ಳದೇ ಉತ್ತಮವಾಗಿ ಕಾಪಾಡಿಕೊಳ್ಳುವ ಮೂಲಕ ಸÀದೃಢ ದೇಶ ಕಟ್ಟಲು ಯುವ ಜನತೆ ಮುಂದಾಗಬೇಕು ಎಂದರು.
ಕಾಲೇಜಿನ ಪ್ರಾಚಾರ್ಯೆ ಸುನಿತಾ ಕಟ್ಟಿಮನಿ ಮಾತನಾಡಿದರು. ಸಂಸ್ಥೆಯ ನಾಮಿನಿ ಚೇರ್ಮನ್ ಎಂ.ಎA. ಸಜ್ಜನ, ಡಾ. ಎಚ್. ವೆಂಕಟೇಶ, ಸಂಗೀತ ಸೌದಿ, ಸುನೀತಾ ಔರಸಂಗ, ಮೇಘಾ ಹಳಕಟ್ಟಿ, ತೇಜಸ್ವಿನಿ ಬನ್ನಿಕೊಪ್ಪ, ಸವಿತಾ ಬಿರಾದಾರ, ವನಜಾಕ್ಷಿ ನಿಡೋಣಿ, ಅಜಿತ ಪ್ಯಾಟಿ, ರಮೇಶ ಮೇತ್ರಿ, ಜಗದೀಶ ಸಾತಿಹಾಳ, ಪರಶುರಾಮ ತರಳಗಟ್ಟಿ ಮತ್ತಿತರರಿದ್ದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಽ ಬೋಽಸಲಾಯಿತು. ಅಭಿಷೇಕ ಚಿಂಚಲಿ ನಿರೂಪಿಸಿದರು. ಜಯಲಕ್ಷಿ÷್ಮÃ ಅನವಾಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net