ಯೋಗದಿಂದ ರೋಗ ಮುಕ್ತರಾಗಿರಿ

ಗೊಳಸಂಗಿಯಲ್ಲಿ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ಹೊನವಾಡ ಮಾತನಾಡಿದರು. ಯೋಗ ಪಟು ದುಂಡಪ್ಪ ಕುಂಬಾರ, ಕಾಶಿನಾಥ ಅವಟಿ, ಎನ್.ಎಸ್.ಹೂಗಾರ ಇತರರಿದ್ದರು.
ಗೊಳಸಂಗಿಯಲ್ಲಿ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ಹೊನವಾಡ ಮಾತನಾಡಿದರು. ಯೋಗ ಪಟು ದುಂಡಪ್ಪ ಕುಂಬಾರ, ಕಾಶಿನಾಥ ಅವಟಿ, ಎನ್.ಎಸ್.ಹೂಗಾರ ಇತರರಿದ್ದರು.
Published on
ಗೊಳಸಂಗಿ: ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಸಕ್ತಿಯಂತೆ 12ವರ್ಷಗಳ ಹಿಂದೆ ರಾಷ್ಟçವ್ಯಾಪಿ ಸಂಚಲನ ಮೂಡಿಸಿದ ಅಂತಾರಾಷ್ಟಿçÃಯ ಯೋಗ ದಿನವನ್ನು ವಿಜಯವಾಣಿ ದಿನಪತ್ರಿಕೆ ಮಾಧ್ಯಮ ಸಹಯೋಗದಲ್ಲಿ ಕಳೆದ 9 ವರ್ಷಗಳಿಂದ ಮುನ್ನಡೆಯುತ್ತ ಬಂದಿರುವುದು ಶ್ಲಾಘನೀಯ ಎಂದು ಸ್ಥಳೀಯ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಹೊನವಾಡ ಹೇಳಿದರು.
ಇಲ್ಲಿನ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಗುರುವಾರ ವಿಜಯವಾಣಿ ದಿನಪತ್ರಿಕೆ ಮಾಧ್ಯಮ ಸಹಯೋಗದೊಂದಿಗೆ ನಡೆದ ಅಂತಾರಾಷ್ಟಿçÃಯ ಯೋಗ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಪತಂಜಲಿ ಯೋಗ ಸಮಿತಿ ಸಂಚಾಲಕ ಕಾಶಿನಾಥ ಅವಟಿ ಮಾತನಾಡಿ, ಯಾಂತ್ರಿಕ ಬದುಕಿನಲ್ಲಿ ಮನುಷ್ಯ ಇಂದು ನಗುವುದನ್ನೇ ಮರೆತಿದ್ದಾನೆ. ರಜಾ ದಿನದಲ್ಲಿ ನಗುವನ್ನು ಅನುಭವಿಸಲು ದುಡ್ಡು ಖರ್ಚು ಮಾಡಿ ಮನರಂಜನೆಯನ್ನು ವೀಕ್ಷಿಸುವಂತಾಗಿದೆ. ನಿತ್ಯವೂ ಯೋಗವನ್ನು ರೂಢಿಸಿಕೊಂಡು ನಿರೋಗಿಯಾಗಬೇಕೆಂದರು.
ಯೋಗಪಟು ದುಂಡಪ್ಪ ಕುಂಬಾರ, ಶಾಲಾ ಸಲಹಾ ಸಮಿತಿ ಅಧ್ಯಕ್ಷ ಬಿ.ಎಸ್.ಮೇಟಿ, ಶಿಬಿರಾರ್ಥಿ ಅಮರೇಶಗೌಡ ಪಾಟೀಲ, ಶಿಕ್ಷಕ ಶ್ರೀಪತಿಗೌಡ ಎಸ್.ಆರ್. ಮಾತನಾಡಿದರು.
ಅನಿಲಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗನಗೌಡ ಯಂಕAಚಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎನ್.ಎಸ್.ಹೂಗಾರ, ಬಸವರಾಜ ಮೇತ್ರಿ, ರಾಜೇಂದ್ರ ಬಡಿಗೇರ, ದೇವೇಂದ್ರ ಬಳಮಕರ, ಅನಿಲಕುಮಾರ ಯಂಕAಚಿ, ಗಂಗಾಧರ ಗಣಿ, ರಾಮಣ್ಣ ಕುಂಬಾರ ಇತರರಿದ್ದರು.
ಪತ್ರಕರ್ತ ಡಿ.ಬಿ. ಕುಪ್ಪಸ್ತ ಸ್ವಾಗತಿಸಿ ನಿರೂಪಿಸಿದರು. ಮುಖ್ಯಗುರು ಸುಪ್ರಿಯಾ ಎಂ.ಎA. ವಂದಿಸಿದರು.
ಯೋಗಪಟು ದುಂಡಪ್ಪನಿಗೆ ಗೌರವ
ಯೋಗ ಶಿಬಿರದ ಸಮಾರೋಪದ ನಿಮಿತ್ತವಾಗಿ ಕೊಲ್ಹಾರ ತಾಲೂಕಿನ ಅರಷಣಗಿ ಗ್ರಾಮದ ಯೋಗಪಟು ದುಂಡಪ್ಪ ಬಸಪ್ಪ ಕುಂಬಾರ ಅವರು ವೀರಗಾಸೆ ಒಡಪು ಹೇಳುವ ಜತೆಗೆ ಶಿರ್ಷಾಸನ, ಕೇವಲ 5 ನಿಮಿಷಗಳಲ್ಲಿ ನೂರಾರು ಭಸ್ಕಿ ಹೊಡೆಯುವುದಲ್ಲದೇ ಹಲವಾರು ಭಂಗಿಗಳ ಪ್ರದರ್ಶನ ನೀಡಿ ಅಚ್ಚರಿ ಮೂಡಿಸಿದರು. ತಮ್ಮ ಈ ಇಳಿ ವಯಸ್ಸಿನಲ್ಲಿ ಆರೋಗ್ಯವಂತರಾಗಿರಲು ಯೋಗವೇ ಮೂಲ ಕಾರಣವೆಂದರು. ವಿಜಯವಾಣಿ ಮಾಧ್ಯಮ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ ಇವರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net