ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಶಾಲೆಗೆ ಭೂಮಿ ದಾನ ಮಾಡಿದ ಮಲ್ಲಪ್ಪ ಶಿವಣ್ಣವರ ಮತ್ತು ಧರೆಪ್ಪ ಶಿವಣ್ಣವರ ಸಹೋದರರನ್ನು ಸಚಿವರು ಸನ್ಮಾನಿಸಿ ಗೌರವಿಸಿದರು. ಮಮದಾಪುರ ಅಭಿನವ ಮುರುಗೇಂದ್ರ ಸ್ವಾಮೀಜಿ, ಮುಖಂಡರಾದ ಮುತ್ತಪ್ಪ ಶಿವಣ್ಣವರ, ಕೆ.ಎಚ್. ಮುಂಬಾರಡ್ಡಿ, ಸೋಮಶೇಖರ ಪಾಟೀಲ, ಹಣಮಂತ ಸೊನ್ನದ, ಉಮೇಶ ಮಲ್ಲಣ್ಣವರ, ಬಸವರಾಜ ಪಾಟೀಲ, ಪರಮಾನಂದ ಚಲವಾದಿ, ಬಸವರಾಜ ಬೊಮಾರ, ಹಣಮಂತ ಛಲವಾದಿ, ಎಂ.ಕೆ. ಶಿವಣ್ಣವರ, ಕಲ್ಲಪ್ಪ ಶಿವಣ್ಣವರ, ಲೋಕೋಪಯೋಗಿ ಇಲಾಖೆ ಎಇಇ ಪ್ರಮೋದಕುಮಾರ ಹಟ್ಟಿ, ಎಇ ವಿಜಯ ಹಿರೇಮಠ, ಕೆಆರ್‌ಐಡಿಎಲ್ ಎಇಇ ಪ್ರವೀಣ ಮಠಪತಿ, ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಽಕಾರಿ ಬಸವರಾಜ ತಳವಾರ, ಶಿಕ್ಷಣಾಽಕಾರಿ ವಸಂತ ಚವಾಣ್ ಮತ್ತಿತರರಿದ್ದರು.