ಸರ್ವರ್ ಸಮಸ್ಯೆ ಪರಿಹರಿಸಿ

ಇಂಡಿ ಪಟ್ಟಣದ ತಡವಲಗಾ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ ಸರದಿ ಸಾಲಿನಲ್ಲಿ ಕುಳಿತ ಪಡಿತರ ಕಾರ್ಡ್ದಾರರು.
ಇಂಡಿ ಪಟ್ಟಣದ ತಡವಲಗಾ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ ಸರದಿ ಸಾಲಿನಲ್ಲಿ ಕುಳಿತ ಪಡಿತರ ಕಾರ್ಡ್ದಾರರು.
Published on
ಇಂಡಿ: ಸರ್ವರ್ ಕೊರತೆಯಿಂದ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಪಡಿತರ ಪಡೆಯಲು ಜನರು ಹರಸಾಹಸ ಪಡುತ್ತಿರುವ ಘಟನೆ ನಡೆದಿದೆ.
ತಾಲೂಕಿನ ತಡವಲಗಾ ಗ್ರಾಮದ ಪಿಕೆಪಿಎಸ್ ನ್ಯಾಯಬೆಲೆ ಅಂಗಡಿ ಮುಂದೆ ಅಕ್ಕಿ ಪಡೆಯಲು ಜನರು ಸಾಲುಗಳಲ್ಲಿ ಇಡೀ ದಿನ ನಿಂತರೂ ಅಕ್ಕಿ ಪಡೆಯಲು ಆಗುತ್ತಿಲ್ಲ. ಈ ತಿಂಗಳ ೩೧ರೊಳಗೆ ಅಕ್ಕಿ ಪಡೆದುಕೊಳ್ಳದಿದ್ದರೆ ಅಕ್ಕಿ ಕೈತಪ್ಪಿ ಹೋಗುತ್ತದೆ. ಆದರೆ, ಬಿಪಿಲ್ ಕಾರ್ಡ್ದಾರರು ಹೆಬ್ಬೆಟ್ಟು ಕೊಡಲು ಹೋದಾಗ ಸರ್ವರ್ ಸಮಸ್ಯೆ ಆಗುತ್ತಿದೆ. ಇದರಿಂದ ಇಡೀ ದಿನ ಸರತಿಯಲ್ಲಿ ನಿಂತರೂ ಅಕ್ಕಿ ಸಿಗದೆ ಜನರು ನಿರಾಸೆಯಿಂದ ಮನೆಗೆ ಮರಳುವಂತಾಗಿದೆ.
ಸರ್ವರ್ ಸಮಸ್ಯೆಯಿಂದಾಗಿ ಮೂರು ದಿನಗಳಿಂದ ನಮಗೆ ಪಡಿತರ ಪಡೆಯಲು ಆಗುತ್ತಿಲ್ಲ. ತೋಟದ ಕೆಲಸಕ್ಕೆ ರಜೆ ಮಾಡಿ ರೇಷನ್ ಪಡೆಯಲು ಬರುತ್ತೇವೆ. ಬಿಸಿಲಲ್ಲಿ ಇಡೀ ದಿನ ಕಾದರೂ ಅಕ್ಕಿ ಸಿಗುತ್ತಿಲ್ಲ ಎಂದು ಜನರು ಬೇಸರ ಹೊರಹಾಕಿದ್ದಾರೆ.
ತಡವಲಗಾ ಗ್ರಾಮದಲ್ಲಿ ಸುಮಾರು ೨,೪೦೦ ಬಿಪಿಎಲ್ ಕಾರ್ಡ್ದಾರರು ಹಾಗೂ ೩೦೦ ಎಪಿಎಲ್ ಕಾರ್ಡ್ದಾರರು ಇದ್ದು, ಇನ್ನು ಸುಮಾರು ಏಳು ನೂರು ಕಾರ್ಡ್ದಾರರಿಗೆ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲಾಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಸಮಸ್ಯೆ ಪರಿಹರಿಸಬೇಕು ಇಲ್ಲವಾದರೆ ಅನೇಕ ಕಾರ್ಡ್ದಾರರು ಪಡಿತರ ಪಡಿದುಕೊಳ್ಳದೆ ವಂಚಿತರಾಗುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net