ಮೈಸೂರು ಸ್ಯಾಂಡಲï ಸೋಪು ಹಾಗೂ ಉತ್ಪನ್ನಗಳು ಗ್ರಾಹಕರ ಜನಪ್ರಿಯತೆ ಪಡೆದುಕೊಂಡ ಬ್ರ‍್ಯಾಂಡ್ ಆಗಿದೆ. ಅಲ್ಲದೆ, ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಮೈಸೂರು ಸ್ಯಾಂಡಲï ಮೊದಲಾದ ಉತ್ಪನ್ನ ಉತ್ಪಾದಿಸುವ ಘಟಕ ಮೂರು ಬಾರಿ ಸಾರ್ವಜನಿಕ ಶ್ರೇಷ್ಠತೆಗಾಗಿ ಮುಖ್ಯಮಂತ್ರಿ ರತ್ನ ಪ್ರಶಸ್ತಿಯೂ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಸಂಸ್ಥೆಯ ಶ್ರೀಗಂಧದೆಣ್ಣೆ ಸೇರಿ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಆಗರಬತ್ತಿ ಹಾಗೂ ಇನ್ನಿತರ ಸುಮಾರು 50ಕ್ಕೂ ಅಽಕ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದರು.