ಪರಿಪೂರ್ಣ ವೈದ್ಯಕೀಯ ಅಧ್ಯಯನಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿ ಅಗತ್ಯ

ವಿಜಯಪುರ ನಗರದಲ್ಲಿ ಪ್ರಥಮ ವರ್ಷದ ಶಸö ಚಿಕಿತ್ಸೆ ಆಧಾರಿತ ವಿಭಾಗಗಳ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರವನ್ನು ಡಾ. ತೇಜಸ್ವಿನಿ ವಲ್ಲಭ ಉದ್ಘಾಟಿಸಿದರು. ಮುಂಜನಾಥ ಕೋಟೆಣ್ಣವರ, ಗಿರೀಶ ಕುಂದಳ್ಳಿ ಮತ್ತಿತರರಿದ್ದರು.
ವಿಜಯಪುರ ನಗರದಲ್ಲಿ ಪ್ರಥಮ ವರ್ಷದ ಶಸö ಚಿಕಿತ್ಸೆ ಆಧಾರಿತ ವಿಭಾಗಗಳ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರವನ್ನು ಡಾ. ತೇಜಸ್ವಿನಿ ವಲ್ಲಭ ಉದ್ಘಾಟಿಸಿದರು. ಮುಂಜನಾಥ ಕೋಟೆಣ್ಣವರ, ಗಿರೀಶ ಕುಂದಳ್ಳಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ, ವಿಜಯಪುರ
ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯು ದೇಶಾದ್ಯಂತ ವೈದ್ಯಕೀಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಚಲಿಸುವ ವಾಹನದ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಪರಿಪೂರ್ಣ ವೈದ್ಯಕೀಯ ಅಧ್ಯಯನಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿ ಅಗತ್ಯ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ ಹೇಳಿದರು.
ನಗರದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಶಸ್ತ್ರ ಚಿಕಿತ್ಸೆ ಆಧಾರಿತ ವಿಭಾಗಗಳ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈಗಾಗಲೇ, ವಿಶ್ವದರ್ಜೆಯ ಕೌಶಲ್ಯಾಭಿವೃದ್ಧಿ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.
ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶಸ್ತ್ರ ಚಿಕಿತ್ಸೆ ಆಧಾರಿತ ವಿಭಾಗಗಳ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ರೋಗಿಗಳಿಗೆ ಸಂಪೂರ್ಣ ಪ್ರಮಾಣದ ಚಿಕಿತ್ಸೆ ನೀಡುವ ಮುನ್ನ ಇಂತಹ ಕೌಶಲ್ಯಾಭಿವೃದ್ಧಿ ತರಬೇತಿಗಳು ಅವರ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತವೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಾವಳಿಗಳ ಪ್ರಕಾರವೂ ಇಂತಹ ತರಬೇತಿಗಳು ಅತ್ಯಗತ್ಯವಾಗಿವೆ ಎಂದು ತಿಳಿಸಿದರು.
ಶಿಬಿರದಲ್ಲಿ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯ, ಅಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆಸ್ಪತ್ರೆಯ ಶಸ್ತ್ರ
ಚಿಕಿತ್ಸೆ ವಿಭಾಗ, ಎಲುಬು ಮತ್ತು ಕೀಲು ವಿಭಾಗ ಹಾಗೂ ಸ್ತ್ರೀರೋಗ ವಿಭಾಗಗಳ ಸುಮಾರು ೬೦ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.
ಪ್ರಾಧ್ಯಾಪಕ ಎಂ.ಬಿ. ಪಾಟೀಲ, ವಿಜಯಾ ಪಾಟೀಲ, ರಮಾಕಾಂತ ಬಳೂರಕರ, ದೀಪಕ ಚವಾಣ, ದಯಾನಂದ ಬಿರಾದಾರ, ಪ್ರದೀಪ ಜಾಜು, ಗಿರೀಶ ಕುಂದಳ್ಳಿ, ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಅನಿಲಕುಮಾರ, ಅಮನ ಅಥಣಿಕರ, ಶ್ರೀನಿವಾಸ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net