ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಶಿವಯೋಗಿ ಸಿದ್ಧರಾಮರ ಜಯಂತಿ ಆಚರಿಸಲಾಯಿತು.
Published on:
Copied
Follow Us
ಇಂಡಿ: ಯವ್ವನದಲ್ಲಿ ಸಮಾಜಮುಖಿ ಬದುಕಾರಂಭಿಸಿ, ಕರ್ಮಯೋಗಿ, ಶಿವಯೋಗಿ, ಕಾಯಕಯೋಗಿಯಾಗಿ ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿದ ಸಿದ್ಧರಾಮರ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿಯ ಯುಬಿಎಸ್ ಶಾಲೆಯಲ್ಲಿ ಶಿವಯೋಗಿ ಸಿದ್ಧರಾಮರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಕ್ರಾಂತಿ ಮತ್ತು ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಸಮಾಜದ ಎಲ್ಲ ವರ್ಗದವರು
ಸಿದ್ಧರಾಮರ ಜೀವನ-ವಚನ-ಚಿಂತನೆಗಳನ್ನು ತಿಳಿದುಕೊಂಡು ಬದುಕು ಹಸನಾಗಿಸಿಕೊಳ್ಳಬೇಕು ಎಂದರು.
ಹಿರಿಯ ಶಿಕ್ಷಕಿ ಎಸ್.ಪಿ. ಪೂಜಾರಿ ಮಾತನಾಡಿ, 12ನೇ ಶತಮಾನದಲ್ಲಿ ಎರಡು ಅಂಕಿತನಾಮವಿರುವ ಏಕೈಕ ವ್ಯಕ್ತಿ ಶಿವಯೋಗಿ ಸಿದ್ಧರಾಮರು ಎಂದರು.
ಮುಖ್ಯ ಶಿಕ್ಷಕ ಕೆ. ಐ. ಮಕಾನದಾರ, ಶಿಕ್ಷಕಿ ಎನ್.ಬಿ.ಚೌಧರಿ, ಅತಿಥಿ ಶಿಕ್ಷಕಿ ಅಲಿಯಾ ಅಂಗಡಿ, ಗ್ರಾಮಸ್ಥ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿ ಮಕ್ಕಳು ಉಪಸ್ಥಿತರಿದ್ದರು.