ಸಿದ್ಧಲಿಂಗಯ್ಯನವರ ವಿಮರ್ಶಾತ್ಮಕ ವಿಚಾರ ಅನುಕರಣೀಯ

ವಿಜಯಪುರದ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ಕಚೇರಿಯಲ್ಲಿ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ಸಿದ್ಧಲಿಂಗಯ್ಯನವರ ನುಡಿನಮನ ಕಾರ್ಯಕ್ರಮ ನಡೆಯಿತು. ಬಿ.ಎಚ್. ನಾಡಗಿರಿ, ಬಸವಂತ ಗುಣದಾಳ, ಸೂರ್ಯಕಾಂತ ಹೊಸಮನಿ ಮತ್ತಿತರರಿದ್ದಾರೆ.

Published on
ವಿಜಯಪುರ : ನಗರದ ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯ ಕಚೇರಿಯಲ್ಲಿ ಇತ್ತೀಚೆಗೆ ದಲಿತ ಕವಿ, ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ಸಿದ್ಧಲಿಂಗಯ್ಯನವರ ನುಡಿನಮನ ಕಾರ್ಯಕ್ರಮ ನಡೆಯಿತು.
ಸಮಿತಿಯ ಜಿಲ್ಲಾಧ್ಯಕ್ಷ ಬಿ.ಎಚ್. ನಾಡಗಿರಿ ಕವಿ ಸಿದ್ಧಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಕವಿ ಸಿದ್ಧಲಿಂಗಯ್ಯನವರು ಆಳವಾದ ವಿಮರ್ಶಾತ್ಮಕ ವಿಚಾರಗಳನ್ನು ಹಾಗೂ ಅವರ ಸಂಘಟನಾ ಶಕ್ತಿಯ ಕುರಿತು ಸ್ಮರಣೆ ಮಾಡಿದರು.
ಜಿಲ್ಲಾ ಗೌರವಾಧ್ಯಕ್ಷ ಬಸವಂತ ಗುಣದಾಳ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ ಮಾತನಾಡಿದರು. ರಾಜ್ಯ ಸಲಹಾ ಸಮಿತಿಯ ಸದಸ್ಯ ಮುದ್ದಣ್ಣ ಭೀಮನಗರ, ಉಪಾಧ್ಯಕ್ಷ ರವಿ ಯಲಡಗಿ, ಎಸ್.ಎಂ. ಡೋಣಿ, ಸಹ ಕಾರ್ಯದರ್ಶಿ ವಿಜಯಕುಮಾರ ಮುದ್ದೇಬಿಹಾಳ, ಸಂಘಟನಾ ಕಾರ್ಯದರ್ಶಿ ನಿಜು ಮೇಲಿನಕೇರಿ ಮತ್ತಿತರರಿದ್ದರು.
ಜಿಲ್ಲಾ ಕೋಶಾಧ್ಯಕ್ಷ ಮಹೇಶ ಹೊನ್ನಾಕಟ್ಟಿ ಸ್ವಾಗತಿಸಿದರು. ಜಿ.ಎಂ. ಚಲವಾದಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net