ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಪುಣ್ಯತಿಥಿ

ಮನಗೂಳಿ ಪಟ್ಟಣದ ವಿಠ್ಠಲ ಮಂದಿರದಲ್ಲಿ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಪುಣ್ಯತಿಥಿ ಅಂಗವಾಗಿ ಸಂತರು ಭಜನೆ ಮಾಡಿದರು.
ಮನಗೂಳಿ ಪಟ್ಟಣದ ವಿಠ್ಠಲ ಮಂದಿರದಲ್ಲಿ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಪುಣ್ಯತಿಥಿ ಅಂಗವಾಗಿ ಸಂತರು ಭಜನೆ ಮಾಡಿದರು.
Published on
ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ವಿಠ್ಠಲ ಮಂದಿರದಲ್ಲಿ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಪುಣ್ಯತಿಥಿ ಅಂಗವಾಗಿ ಸಪ್ತಾಹ ಕಾರ್ಯಕ್ರಮ ಇತ್ತೀಚೆಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ನ. 14 ರಿಂದ ನ. 17 ರ ವರಗೆ ಹಮ್ಮಿಕೊಂಡಿದ್ದ ಸಪ್ತಾಹದದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಸಂಜೆ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಭಾವಚಿತ್ರ ಮತ್ತು ಗ್ರಂಥಗಳಿಗೆ ಪೂಜೆ ಸಲ್ಲಿಸಿ ಭಕ್ತಿಯ ಭಜನೆಯೊಂದಿಗೆ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ನಿತ್ಯ ಬೆಳಗ್ಗೆ ಕಾಕಡಾರತಿ ನಂತರ ಜ್ಞಾನೇಶ್ವರ ಪಾರಾಯಣ, ಸಂಜೆ ಪ್ರವಚನ, ಹರಿಪಾಠ, ಕೀರ್ತನೆ ಜಾಗರಣೆ ನಂತರ ದಿಂಡಿ ಸೋಹಳಾ ನಡೆದವು.
ಸಪ್ತಾಹದ ಕೊನೇ ದಿನ ಸೋಮವಾರ ಮಧ್ಯಾಹ್ನ ಭಜನೆಯೊಂದಿಗೆ ಶ್ರೀ ಜ್ಞಾನೇಶ್ವರ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಕಾಲಾ ಕೀರ್ತನ ಅನ್ನಪ್ರಸಾದ ವಿತರಿಸಲಾಯಿತು. ವಿವಿಧ ಗ್ರಾಮಗಳಿಂದ ಸಂತರು, ಭಕ್ತರು ಪಾಲ್ಗೊಂಡು ಭಕ್ತಿ ಸೇವೆ ಸಲ್ಲಿಸಿದರು.
ಸಂತರಾದ ಗ್ಯಾನುಬಾ ಬನಕರ, ಬಾಬು ಅರಳೆಪ್ಪನವರ, ಬಸಗೊಂಡ ಚಿಮ್ಮಲಗಿ, ಗುಂಡು ಪತ್ತಾರ, ಹಣಮಂತ ರೊಳ್ಳಿ, ಯಲ್ಲಪ್ಪ ರೊಳ್ಳಿ, ಶಿವಾಜಿ ಭೋಸಲೆ, ಸದಾಶಿವ ನರಳೆ, ಕೃಷ್ಣಾ ನವಲೆನ್ನವರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net